ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ; ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಆಗ್ರಹಿಸಿ ಬದಿಯಡ್ಕದಲ್ಲಿ ಕಾಂಗ್ರೆಸ್ ಪ್ರತಿಭಟನೆ


  ಬದಿಯಡ್ಕ: ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ   ಹಿನ್ನಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರ ರಾಜಿನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ನಡೆಸಿದ ಸಮರದಲ್ಲಿ  ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ , ಸಂಸದೆ ಪ್ರಿಯಾಂಕ ಗಾಂಧಿ ಹಾಗೂ ಇತರ ನಾಯಕರನ್ನು ಬಂಧಿಸಿದ ಕ್ರಮವನ್ನು ಖಂಡಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಬದಿಯಡ್ಕ ಮಂಡಲ  ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು.

 ಕರ್ಷಕ ಕಾಂಗ್ರೆಸ್ ಕಾರಡ್ಕ ಬ್ಲೋಕು ಸಮಿತಿ ಅಧ್ಯಕ್ಷ ಪೆರುಮುಖ ತಿರುಪತಿ ಕುಮಾರ್ ಭಟ್ ಉದ್ಘಾಟಿಸಿದರು. ಬ್ಲೋಕು , ಮಂಡಲ ,  ಯುವ ಕಾಂಗ್ರೆಸ್ ಸಮಿತಿ ನೇತಾರರಾದ  ಗಂಗಾಧರ ಗೋಳಿಯಡ್ಕ, ಜಗನ್ನಾಥ ರೈ, ಅಶ್ವತಿ ಅಶೋಕನ್, ಲೀಲಾವತಿ ಕುಂಟಾಲು ಮೂಲೆ, ಎಂ. ಅಬ್ಬಾಸ್ ,ರಾಮ ಪಟ್ಟಾಜೆ , ಶಾಫಿ ಗೋಳಿಯಡ್ಕ, ಶ್ರೀನಾಥ್ ಬದಿಯಡ್ಕ, ಕೃಷ್ಣದಾಸ್ ದರ್ಬೆತ್ತಡ್ಕ, ಲೋಹಿತಾಕ್ಷನ್ , ಕೃಷ್ಣ ಕುಮಾರ್ ,  ರವೀಂದ್ರ ಕುಂಟಾಲು ಮೂಲೆ, ರಾಮಕೃಷ್ಣನ್ , ವಾಮನ ನಾಯ್ಕ್ , ಸತೀಶ ಪೆರುಮುಂಡ , ಶಾಫಿ ಗೋಳಿಯಡಿ, ಸವಾದ್ ಬಣ್ಪುತ್ತಡ್ಕ, ಮ್ಯಾಥ್ಯೂ, ಬೆಂಜ ಮಿನ್ , ನಿಜೀಷ್, ಗಿರೀಶ್ ಮೊದಲಾದವರು ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು