ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ; ಲೋಗೋ ವಿನ್ಯಾಸಕ್ಕೆ ಆಹ್ವಾನ





 ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವವು ಬದಿಯಡ್ಕದ ನವಜೀವನ ಶಾಲೆಯಲ್ಲಿ ನಡೆಯಲಿದೆ. ಅಕ್ಟೋಬರ್ 26 ಮತ್ತು 27ರಂದು ವೇದಿಕೆಯೇತರ ಸ್ಪರ್ಧೆಗಳು ಹಾಗೂ ನವೆಂಬರ್ 2, 3 ಮತ್ತು 4ರಂದು ವೇದಿಕೆ ಸ್ಪರ್ಧೆಗಳು ಜರುಗಲಿವೆ.
ಈ ಕಾರ್ಯಕ್ರಮಕ್ಕಾಗಿ ಸುಂದರವಾದ ಲೋಗೋವನ್ನು (ಆಂಗ್ಲ ಭಾಷೆಯಲ್ಲಿ) ತಯಾರಿಸಬೇಕಿದೆ. ಆಸಕ್ತರು ತಮ್ಮ ಲೋಗೋ ವಿನ್ಯಾಸಗಳನ್ನು ಅಕ್ಟೋಬರ್ 9ರಂದು ಸಂಜೆ 5 ಗಂಟೆಯ ಒಳಗಾಗಿ ಪ್ರಧಾನ ಸಂಚಾಲಕರಾದ ಶ್ರೀ ಶ್ರೀಕೃಷ್ಣ ಭಟ್ (ಪ್ರಾಂಶುಪಾಲರು) ಇವರ ವಾಟ್ಸಪ್ (9605470644)ಗೆ ಕಳುಹಿಸಿಕೊಡಬೇಕಾಗಿ ವಿನಂತಿ. 
ಆಯ್ಕೆಯಾಗುವ ಅತ್ಯುತ್ತಮ ಲೋಗೋ ವಿನ್ಯಾಸಗೊಳಿಸಿದವರಿಗೆ ಸೂಕ್ತ ಗೌರವವನ್ನೂ ನೀಡಲಾಗುವುದು ಎಂದು ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು