ಅಡೂರು ಬಳವಂತ್ತಡ್ಕದಲ್ಲಿ ಸಿಡಿಲು ಬಡಿದು ಯುವಕ ಮೃತ್ಯು

 


ಅಡೂರು: ಸಿಡಿಲು ಬಡಿದು ಯುವಕ ಮೃತಪಟ್ಟ ಘಟನೆ ಅಡೂರು ಬಳವಂತ್ತಡ್ಕದಲ್ಲಿ ನಡೆದಿದೆ. ಕುಂಟಾರು ಉಯಿತ್ತಡ್ಕ ನಿವಾಸಿ ನೌಫಲ್(32) ಮೃತಪಟ್ಟ ಯುವಕ. ಇಂದು(ಮಂಗಳವಾರ) ಸಾಯಂಕಾಲ 7.30 ರ ವೇಳೆ ಈ ಘಟನೆ ನಡೆದಿದೆ.  ಬಳವಂತ್ತಡ್ಕದಲ್ಲಿನ ಸಂಬಂಧಿಕರ ಮನೆಯ ಸಿಟೌಟಿನಲ್ಲಿ ಕುಳಿತಿದ್ದಾಗ ಸಿಡಿಲು ಬಡಿದಿದೆ. ಕೂಡಲೇ ಅವರನ್ನು ಮುಳ್ಳೇರಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ  ಪ್ರಾಣ ಉಳಿಸಲಾಗಲಿಲ್ಲ. ಮೃತರು ಪತ್ನಿ ಸುಹರ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ..ಮೃತರು ತಿರುವನಂತಪುರಂನಲ್ಲಿ ಜ್ಯೂಸ್ ಅಂಗಡಿಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು