ಕೊಚ್ಚಿನ್: ಸಿ.ಎಂ.ಆರ್.ಎಲ್.ಎಕ್ಸಾಲೋಜಿಕ್ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹಿತ ತಪ್ಪಿತಸ್ಥರ ವಿರುದ್ದ ಕೇಸು ದಾಖಲಿಸಬಹುದೆಂದು ಹೈಕೋರ್ಟ್ ಆದೇಶ ನೀಡಿದೆ. ಪಿಣರಾಯಿ ವಿಜಯನ್, ಪುತ್ರಿ ವೀಣಾ.ಟಿ, ಅಳಿಯ ಹಾಗೂ ಮಾಜಿ ಸಚಿವ ಮುಹಮ್ಮದ್ ರಿಯಾಸ್ ಎಂಬಿವರ ವಿರುದ್ದ ಕೇಸು ದಾಖಲಿಸಬಹುದೆಂದು ಹೈಕೋರ್ಟ್ ಹೇಳಿದೆ.
ಸಿ..ಎಂ.ಆರ್.ಎಲ್- ಎಕ್ಸಾಲೋಜಿಕ್ ಲಂಚ ಪ್ರಕರಣದ ಕುರಿತು ಇ.ಡಿ ತನಿಖೆ ನಡೆಸುತ್ತಿದೆ. ಇ.ಡಿ.ಯು ಈಗಾಗಲೇ ಪಿಣರಸಯಿ ವಿಜಯನ್ ಅವರ ಪುತ್ರಿ ವೀಣಾ.ಟಿ.ಅವರನ್ನು ವಿಚಾರಣೆ ನಡೆಸಿತ್ತು. ಈ ವೇಳೆ ಲಭಿಸಿದ ಮಾಹಿತಿಯಂತೆ ಪಿಣರಾಯಿ ವಿಜಯನ್, ವೀಣಾ ಹಾಗೂ ಮುಹಮ್ಮದ್ ರಿಯಾಸ್ ವಿರುದ್ದ ಕೇಸು ದಾಖಲಿಸುವಂತೆ ರಾಜ್ಯ ಡಿ.ಜಿ.ಪಿ.ಗೆ ಇ.ಡಿ.ಅಧಿಕಾರಿಗಳು ಪತ್ರ ನೀಡಿದ್ದರು. ಆದರೆ ರಾಜ್ಯ ಸರಕಾರವು ಪಿಣರಾಯಿ ವಿರುದ್ದ ಕೇಸು ದಾಖಲಿಸದೆ ಕ್ರೈಂಬ್ರಾಂಚ್ ತನಿಖೆ ಆರಂಭಿಸಿತ್ತು. ಇದರ ವಿರುದ್ದ ಅಡ್ವಕೇಟ್ ಶಾಜಹಾನ್ ಎಂಬವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಹೈಕೋರ್ಟ್ ತೀರ್ಪು ನೀಡಿದೆ.
Tags
ಕೊಚ್ಚಿನ್
