ಆದಿತ್ಯವಾರಗಳಂದು ರಜೆ ತೆಗೆಯುತ್ತಿರುವ ಖಾಸಗಿ ಬಸ್ಸುಗಳು; ಪ್ರಯಾಣಿಕರಿಗೆ ಸಂಕಷ್ಟ


 ಬದಿಯಡ್ಕ: ಆದಿತ್ಯವಾರಗಳಂದು ಕೆಲವು ಖಾಸಗಿ ಬಸ್ಸುಗಳು ರಜೆ ಮಾಡುತ್ತಿರುವುದು, ಇತರ ದಿನಗಳಲ್ಲಿ ಗ್ರಾಮೀಣ ಪ್ತದೇಶಗಳ ಪ್ರಯಾಣ ರದ್ದುಗೊಳಿಸುತ್ತಿರುವುದು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಖಾಸಗಿ ಬಸ್ಸನ್ನೇ ನಂಬಿಕೊಂಡಿರುವ ನೂರಾರು ಜನರು ಇದರಿಂದಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕಾಸರಗೋಡು-ಪೆರ್ಲ, ಬದಿಯಡ್ಕ-ಪಳ್ಳತ್ತಡ್ಕ-ಏತಡ್ಕ, ಬದಿಯಡ್ಕ-ಕುಂಬ್ಡಾಜೆ ಸಹಿತ ವಿವಿದ ರೂಟುಗಳಲ್ಲಿ ಸಾಗುವ ಖಾಸಗಿ ಬಸ್ಸುಗಳಿಗೆ ಕೆಲವು ಆದಿತ್ಯವಾರಗಳಂದು ರಜೆಯಾಗಿರುತ್ತದೆ. ಈ ಬಗ್ಗೆ ಪ್ರಯಾಣಿಕರು ಪ್ರತಿಭಟಿಸತೊಡಗಿದ್ದು ಆರ್.ಟಿ.ಒ.ಅಧಿಕಾರಿಗಳಿಗೆ ದೂರು ನೀಡಿದ್ದಾರೆ. 

    ‌ಗ್ರಾಮೀಣ ಪ್ರದೇಶಗಳ ಹೆಸರಿನಲ್ಲಿ ರೂಟು ಪಡೆದುಕೊಂಡ ಹಲವು ಬಸ್ಸುಗಳು, ಆ ಕಡೆಯ ಯಾನ ರದ್ದು ಮಾಡುತ್ತಿರುವುದಾಗಿಯೂ ತಿಳಿದು ಬಂದಿದೆ. ರಾತ್ರಿ ಏತಡ್ಕದಲ್ಲಿ ಪ್ರಯಾಣ ಕೊನೆಗೊಳಿಸಬೇಕಿದ್ದ ಒಂದು ಬಸ್ಸು ಬದಿಯಡ್ಕದ ವರೆಗೆ ಮಾತ್ರ ಬಂದು ನಿಲ್ಲುತ್ತವೆ. ಕಾಸರಗೋಡು, ಮಲ್ಲ, ಬದಿಯಡ್ಕ ಎಂಬೆಡೆಗಳಲ್ಲಿ ನಿಲ್ಲಬೇಕಿದ್ದ ಬಸ್ಸುಗಳು ಇದರ ಮಾಲಕರ ಮನೆಯಲ್ಲಿ ‌ನಿಲ್ಲುತ್ತದೆ. ಕಾಟುಕುಕ್ಕೆ ಭಾಗಕ್ಕೆ ಹಗಲು ಹೋಗಬೇಕಾದ ಬಸ್ಸುಗಳು ಹೋಗುತ್ತಿಲ್ಲ ಎಂದೂ ತಿಳಿದು ಬಂದಿದೆ.‌

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು