ತಿರುವನಂತಪುರಂ: ತಿರುವನಂತಪುರಂ ಕಾರ್ಪೊರೇಷನ್ ಕೌನ್ಸಿಲರ್ ಸ್ಥಾನಕ್ಕೆ ಮಾಜಿ ಡಿಜಿಪಿ ಆರ್.ಶ್ರೀಲೇಖ ರಾಜೀನಾಮೆ ಸಲ್ಲಿಸಿದ್ದಾರೆ. ತಿರುವನಂತಪುರಂ ಶಾಸ್ತಮಂಗಲಂ ವಾರ್ಡು ಕೌನ್ಸಿಲರ್ ಆಗಿದ್ದ ಅವರು ಕಳೆದ 30 ರಂದು ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ತಿರುವನಂತಪುರಂ ಕಾರ್ಪರೇಶನ್ ನಲ್ಲಿ ಒಟ್ಟು 101 ವಾರ್ಡುಗಳಿದ್ದು ಬಿಜೆಪಿ 51 ವಾರ್ಡುಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಪಡೆದಿದೆ. ಆದರೆ ಓರ್ವ ಸದಸ್ಯ ಸುಗುತನ್ ಕಾಪಾ ಕಾಯ್ದೆಯಂತೆ ಜೈಲಿನಲ್ಲಿದ್ದಾರೆ. ಆರ್.ಶ್ರೀಲೇಖ ಸಹ ರಾಜೀನಾಮೆ ನೀಡಿದರೆ ಬಿಜೆಪಿ ಸದಸ್ಯರ ಸಂಖೈ 49 ಆಗಲಿದೆ.
ರಾಜೀನಾಮೆ ಪತ್ರ ಲಭಿಸಿದೆಯೆಂದು ಮೇಯರ್ ವಿ.ವಿ.ರಾಜೇಶ್ ತಿಳಿಸಿದ್ದಾರೆ.
Tags
ತಿರುವನಂತಪುರಂ
