ಉಪ್ಪಳ: ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ಕಾಂಗ್ರೆಸ್ ಮುಖಂಡರಾಗಿದ್ದ ಪೈವಳಿಕೆ, ಕಯ್ಯಾರ್. ಕನ್ನಡಿಜಾಲು ಥಾಮಸ್ ಕ್ರಾಸ್ತಾ (94) ನಿಧನರಾದರು.
ಅವರು ಪೈವಳಿಕೆ ಪಂಚಾಯತ್ ಸದಸ್ಯರಾಗಿ, ಕಯ್ಯಾರು ಡಾನ್ ಬಾಸ್ಕೋ ಶಾಲೆಯ ಶಿಕ್ಷಕರಾಗಿ ಮತ್ತು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪೈವಳಿಕೆ ಮಂಡಲ ಅಧ್ಯಕ್ಷರಾಗಿ ಹಾಗೂ ಬ್ಲಾಕ್ ಸಮಿತಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಅವರ ನಿಧನದ ಸುದ್ದಿ ತಿಳಿದು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅವರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಮೃತರು ಪತ್ನಿ ಮೇರಿ ಕ್ರಾಸ್ತಾ ಪುತ್ರ ಕ್ರಿಸ್ಟಿಫರ್ ಜೆ. ಕ್ರಾಸ್ತಾ ಸೊಸೆ: ಲವಿನಾ ಡಿಸೋಜಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Tags
ಉಪ್ಪಳ
