ಸಿಡಿಲು ಮಳೆಗೆ ಮನೆ ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿ; ಗ್ರಾಮ ಪಂಚಾಯತು ಉಪಾಧ್ಯಕ್ಷರಿಂದ ಬೇಟಿ


 ಪೆರಡಾಲ: ಬದಿಯಡ್ಕ ಗ್ರಾಮ ಪಂಚಾಯತ್‌ನ 13ನೇ ವಾರ್ಡ್ ಪೆರಡಾಲ ವ್ಯಾಪ್ತಿಯಲ್ಲಿ ನಿನ್ನೆ ಸುರಿದ ಸಿಡಿಲು ಸಹಿತ ಮಳೆಯಿಂದ ಮನೆಗೆ ಹಾಗೂ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.

         ಬದಿಯಡ್ಕದ ಬೀಜoತಡ್ಕ ದಲ್ಲಿ ಇಂಡಿಯನ್ ಪೆಟ್ರೋಲ್ ಪಂಪ್‌ನ ವಿದ್ಯುತ್ ಮೀಟರ್ ಬೋರ್ಡ್ ಸೇರಿದಂತೆ ವಿವಿಧ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ಸಮೀಪದ ಬೀಜಂತಡ್ಕ ನಿವಾಸಿ ಹಂಸ ಕೆ ಅವರ ಮನೆಯ ಸನ್‌ಸೈಡ್ ಹಾಗೂ ವಿದ್ಯುತ್ ಉಪಕರಣಗಳಿಗೂ ಹಾನಿಯಾಗಿದೆ.

      ಹಾನಿಗೊಳಗಾದ ಸ್ಥಳಗಳಿಗೆ ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆ. ಎಂ. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತ ರಘುನಾಥ ಶೆಟ್ಟಿ ಜೊತೆಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು