ಸಾರ್ವಜನಿಕ ಪ್ರದೇಶದಲ್ಲಿ ಕುಟು-ಕುಟು ಜುಗಾರಿ; 6 ಮಂದಿಯ ಸೆರೆ, 2290 ರೂ.ವಶ


 ಬದಿಯಡ್ಕ: ಕುಟು-ಕುಟು ಜುಗಾರಿ ಆಟದಲ್ಲಿ ನಿರತರಾಗಿದ್ದ ಆರು ಮಂದಿಯನ್ನು 2,290 ರೂ. ಸಹಿತ  ಬದಿಯಡ್ಕ ಎಸ್‌ಐ ಸುನಿಲ್ ಕುಮಾರ್ ನೇತೃತ್ವದ ಪೊಲೀಸರು  ಬಂಧಿಸಿದ್ದಾರೆ

ಪರ್ಲ ಬಣಜೆಯ ದಿನೇಶ್ (40), ಕುಂಬಡಾಜೆ ಬೆಳ್ಳಪದವಿನ ನವೀನ್ ಪ್ರಕಾಶ್ (50), ಜಯೇಶ್ (36), ನಾರಂಪಾಡಿ ನೆಲ್ಲಿಯಡ್ಕದ ಸತೀಶ್.ಪಿ (31), ಉಬೈಸ್ (29) ಮತ್ತು ಬೆಳ್ಳೂರು ಕೊಡಿಯಡ್ಕದ ಕೃಷ್ಣನ್ (25) ಬಂಧಿತ ಆರೋಪಿಗಳು

ನಿನ್ನೆ (ಆದಿತ್ಯವಾರ) ಸಂಜೆ 4:30ರ ಸುಮಾರಿಗೆ  ನೆಲ್ಲಿಯಡ್ಕ ಬಸ್ ನಿಲ್ದಾಣದ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಹಣವಿಟ್ಟ  ಕುಟು-ಕುಟು ಜುಗಾರಿ ನಡೆಯುತ್ತಿರುವ ಬಗ್ಗೆ ಎಸ್‌ಐ ಸುನಿಲ್ ಕುಮಾರ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಈ ಆರೋಪಿಗಳನ್ನು ಬಂಧಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು