ನವದೆಹಲಿ: ಸಾವರ್ಕರ್ ವಿಷಯದಲ್ಲಿ ರಸ ಪ್ರಶ್ನೆ ಸಿದ್ದ ಪಡಿಸಿದ ಶಿಕ್ಷಕನನ್ನು ಅಮಾನತುಗೈದ ಪ್ರಕರಣ ಇಂದು ರಾಜ್ಯಸಭೆಯಲ್ಲಿ ಮೊಳಗಿತು. ರಾಜ್ಯ ಸಭಾ ಸದಸ್ಯ ಸದಾನಂದನ್ ಮಾಸ್ತರ್ ಈ ವಿಷಯವನ್ನು ರಾಜ್ಯ ಸಭೆಯಲ್ಲಿ ಮಂಡಿಸಿದ್ದಾರೆ. ವಿರೋಧ ಪಕ್ಷ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆಯೂ ಕಾಸರಗೋಡಿನ ಈ ವಿಷಯ ಮಂಡಸಲಾಗಿದೆ. ಕೇರಳದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಬಿಲ್ ಚರ್ಚೆಯ ವೇಳೆ ಸದಾನಂದನ್ ಮಾಸ್ತರ್ ಸಾವರ್ಕರ್ ವಿಷಯವನ್ನು ಪ್ರಸ್ತಾಪಿಸಿದರು. ಕೇಂದ್ರ ಸಚಿವ ಜೆ.ಪಿ.ನಡ್ಡಾ ಸಹ ರಾಜ್ಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು.
ಸಾವರ್ಕರ್ ವಿಷಯದಲ್ಲಿ ಪ್ರಶ್ನೆ ಸಿದ್ದಪಡಿಸಿದ್ದ ತಂಡದ ಓರ್ವ ಹಾಗೂ ಪಳ್ಳತ್ತಡ್ಕ ಎ.ಯು.ಪಿ.ಶಾಲೆಯ ಹಿರಿಯ ಶಿಕ್ಷಕ ಗುರುಪ್ರಸಾದ್ ಅವರನ್ನು ರಾಜ್ಯ ಶಿಕ್ಷಣ ಇಲಾಖೆ ಸಸ್ಪೆಂಡ್ ಮಾಡಿತ್ತು. ಈ ಪ್ರಕರಣದ ವಿರುದ್ದ ಬಿಜೆಪಿ ಸಹಿತ ಸಂಘ ಪರಿವಾರ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದವು
Tags
ನವದೆಹಲಿ
