ಕಾಡು ಕೋಣ ದಾಳಿಯಲ್ಲಿ ಕೋರ್ಟ್ ಉದ್ಯೋಗಿ ಬಲಿ


ಕೋಜಿಕ್ಕೋಡು: ಕೋಜಿಕ್ಕೋಡು ಸಮೀಪದ ವಿಲಂಗಾಡ್‌ನಲ್ಲಿ ಕಾಡುಕೋಣ ದಾಳಿಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ವಾಯಾಡ್ ಉನ್ನತಿಯ ಸುನಿಲ್ ಎಂಬುವವರು ಕಾಡುಕೋಣದ ದಾಳಿಯಲ್ಲಿ ಮೃತಪಟ್ಟವರು.

ವಿಲಂಗಾಡ್ ವಾಯಾಡ್ ಉನ್ನತಿಯಲ್ಲಿ ಈ ಘಟನೆ ನಡೆದಿದೆ. ಜನವಸತಿ ಪ್ರದೇಶಕ್ಕೆ ಬಂದ ಕಾಡುಕೋಣವನ್ನು ಓಡಿಸುವ ಸಂದರ್ಭದಲ್ಲಿ ನಡೆದ ದಾಳಿಯಲ್ಲಿ ಸುನಿಲ್ ಅವರು ಸಾವನ್ನಪ್ಪಿದ್ದಾರೆ. ಸುನಿಲ್ ಅವರು ಚೆಂಗನ್ನೂರು ಕೋರ್ಟ್‌ನಲ್ಲಿ ಉದ್ಯೋಗಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಕುಟ್ಟಿಯಾಡಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿದರೂ ಪ್ರಾಣ ಉಳಿಸಲಾಗಲಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು