ಮೊಗ್ರಾಲು ನಿವಾಸಿಯಾದ 7 ವರ್ಷದ ಬಾಲಕಿ ಶಾರ್ಜಾದಲ್ಲಿ ಕಟ್ಟಡದಿಂದ ಬಿದ್ದು ಮೃತ್ಯು

 

ಶಾರ್ಜಾ: ಮೊಗ್ರಾಲು ನಿವಾಸಿಯಾದ  7 ವರ್ಷದ    ಬಾಲಕಿ ಶಾರ್ಜಾದಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.  ಮೊಗ್ರಲ್ ಮೂಲದ ಮುಬಾರಕ್ ಅಲಿ ಅವರ ಪುತ್ರಿ ಸಫಾ (7)  ಮೃತಪಟ್ಟ ಬಾಲಕಿ. ಇಂದು (ಸೋಮವಾರ) ಬೆಳಿಗ್ಗೆ ಶಾರ್ಜಾದ ಅಲ್ ನಬ್ಬಾ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮಗುವಿನ ತಾಯಿ ಮುರ್ಷಿದಾ ಕೆಲಸಕ್ಕೆ ಹೋಗಿದ್ದರಿಂದ ತಂದೆ ಮುಬಾರಕ್ ಮಾತ್ರ ಫ್ಲ್ಯಾಟ್‌ನಲ್ಲಿದ್ದರು. ಕೊಠಡಿಯಲ್ಲಿ ಆಟವಾಡುತ್ತಿದ್ದ ಸಫಾ, ಕಿಟಕಿಯ ಮೂಲಕ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಗಂಭೀರ ಗಾಯಗೊಂಡ ಬಾಲಕಿಯನ್ನು ತಕ್ಷಣವೇ ಅಲ್ ಖಾಸಿಮಿ ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ತಂದೆ ಮುಬಾರಕ್ ದುಬೈ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕದಲಸ ಮಾಡುತ್ತಿದ್ದಾರೆ. ತಾಯಿ ಮುರ್ಷಿದಾ ಶಾರ್ಜಾದ ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಕುಟುಂಬವು ಇತ್ತೀಗಷ್ಟೆ  ಊರಿಗೆ ಬಂದು ಹಿಂದಿರುಗಿದ್ದರು. ಆದರೂ ತಂದೆ ಇನ್ನೂ ಕೆಲಸಕ್ಕೆ ಹಾಜರಾಗಿರಲಿಲ್ಲ. ಮೃತದೇಹವನ್ನು ಅಲ್ ಖಾಸಿಮಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕಳೆದ 8 ವರ್ಷಗಳಿಂದ ಶಾರ್ಜಾದಲ್ಲಿ ವಾಸಿಸುತ್ತಿರುವ ಈ ದಂಪತಿಯ ಏಕೈಕ ಪುತ್ರಿಯಾಗಿದ್ದಾಳೆ ಸಫಾ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು