ಆದೂರು: ನಾಪತ್ತೆಯಾದ ಯುವಕನ ಮೃತದೇಹ ರಬ್ಬರ್ ತೋಟದಲ್ಲಿನ ಮಾವಿನ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೆಟ್ಟಣಿಗೆ ಕುಳದಪಾರ ಉನ್ನತಿಯ ಸುನಿಲ್ (26) ಮೃತಪಟ್ಟ ಯುವಕ.
ಈ ತಿಂಗಳ 12 ರಂದು ಮನೆಯಿಂದ ಹೊರಟಿದ್ದ ಸುನಿಲ್, ಅನಂತರ ನಾಪತ್ತೆಯಾಗಿದ್ದರು. ಈ ಕುರಿತು ಅವರ ತಂದೆ ಕೊರಗ ಅವರು ಆದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ನಡೆಸಿದ ಹುಡುಕಾಟದ ಬಳಿಕ ನಿನ್ನೆ ಸಂಜೆ 4 ಗಂಟೆಯ ಸುಮಾರಿಗೆ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ರಬ್ಬರ್ ತೋಟದ ಮಾವಿನ ಮರದ ಕೊಂಬೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಮೃತರು ತಾಯಿ ಲಲಿತಾ, ಪತ್ನಿ ದೀಕ್ಷಿತಾ, ಏಕೈಕ ಪುತ್ರಿ ಕೃತಿಕಾ ಹಾಗೂ ತಂಗಿ ಶ್ವೇತಾ ಅವರನ್ನು ಅಗಲಿದ್ದಾರೆ.
Tags
ಮುಳ್ಳೇರಿಯ
