ಬಿಜೆಪಿ ಮುಳಿಯಾರು ಮಂಡಲ ಸಮಿತಿಯ ವತಿಯಿಂದ ಪಳ್ಳಂಗಾಲಿನಿಂದ ಕುಟ್ಟಿಕೋಲ್ ವರೆಗೆ ಹಮ್ಮಿಕೊಳ್ಳಲಾಗಿದ್ದ ತಿರಂಗಾ ಯಾತ್ರೆಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಉದ್ಘಾಟಿಸಿದರು.
ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇತಿಹಾಸವನ್ನು ತಿರುಚಲು ಮುಸ್ಲಿಂ ಲೀಗ್ ಮಾಡುವ ಪ್ರಯತ್ನವನ್ನು ಬಿಜೆಪಿ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದೂ, ಭಯೋತ್ಪಾದಕ, ಮತೀಯ, ಸಂಘಟನೆಗಳ ಅನುಯಾಯಿಗಳನ್ನು ಓಲೈಸಲು ಎಡ ಮತ್ತು ಬಲ ಮುಂಚೂಣಿಗಳು ವಂದೇ ಮಾತರಂ ಹಾಗೂ ವಿ.ಡಿ. ಸಾವರ್ಕರ್ ಅವರನ್ನು ಅವಮಾನಿಸಲು ಮುಂದಾಗುತ್ತಿವೆ ಎಂದೂ ಪಿ.ಆರ್. ಸುನಿಲ್ ಆರೋಪಿಸಿದರು.
ಮಂಡಲ ಅಧ್ಯಕ್ಷ ದಿಲೀಪ್ ಪಳ್ಳಂಜಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಪ್ರಮೀಳಾ ಸಿ. ನಾಯಕ್, ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೋಪಾಲ್, ಮಂಡಲ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮಾನಡುಕಂ ಹಾಗೂ ಜನಪ್ರತಿನಿಧಿಗಳಾದ ವಿದ್ಯಾ ಮಹೇಶ್, ಸಿಂಧು ಮೋಹನ್, ಗಣೇಶನ್, ಉಲ್ಲಾಸ್, ಜಯಕೃಷ್ಣನ್, ಅನನ್ಯ ಉಪಸ್ಥಿತರಿದ್ದು ಮಾತನಾಡಿದರು.
Tags
ಮುಳಿಯಾರು
