ಕ್ಷೇತ್ರ ದರ್ಶನ ನಡೆಸಿ ಮರಳುತ್ತಿರುವ ವೇಳೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಮಹಿಳೆ ಮಂಗಳೂರು ಆಸ್ಪತ್ರೆಯಲ್ಲಿ ಮೃತ್ಯು

 


ಕಾಸರಗೋಡು: ಕ್ಷೇತ್ರ ದರ್ಶನ ಮುಗಿಸಿ ಹಿಂತಿರುಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗೃಹಿಣಿ ಮೃತಪಟ್ಟ ಘಟನೆ ‌ನಡೆದಿದೆ.. ಕಾಲಿಕಡವು ನಿವಾಸಿ ದಿವಂಗತ‌ ಕುಞಕಣ್ಣರ ಪತ್ನಿ ಕಾರ್ತ್ಯಾಯನಿ (68) ಮೃತ ಮಹಿಳೆ. ಈ ತಿಂಗಳ 2 ರಂದು ಬೆಳಿಗ್ಗೆ ಏಚಿಕುಳಂಗರ ಶ್ರೀನಾರಾಯಣಪುರಂ ಕ್ಷೇತ್ರದಲ್ಲಿ  ದರ್ಶನ ನಡೆಸಿ ಮನೆಗೆ ಮರಳುತ್ತಿದ್ದಾಗ ಕಾಲಿಕಡವು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗವಾಗಿ ಬಂದ ಕಾರು ಅವರನ್ನು ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮತ್ತು ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ (ಬುಧವಾರ) ಮಧ್ಯಾಹ್ನದ  ಅವರು ಕೊನೆಯುಸಿರೆಳೆದರು. ಪೊಲೀಸರು ಕೇಸು ದಾಖಲಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು