ಯುವ ಗಾಯಕನ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಕಾಸರಗೋಡು: ಯುವ ಗಾಯಕನೋರ್ವನ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದೆ. ಪಿಲಿಕೋಡ್ ವಯಲ್‌ನ ಕೊತೋಳಿ ವಡಕ್ಕಿನಿಯಿಲ್ ಮಾಧವನ್ ಅವರ ಪುತ್ರ ಕೆ.ವಿ. ಸುಧೀಶ್ (36) ಮೃತಪಟ್ಟ ವ್ಯಕ್ತಿ.

 ಇಂದು  (ಶನಿವಾರ) ಮಧ್ಯಾಹ್ನದ ವೇಳೆಗೆ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಚಂದೇರ ಪೊಲೀಸರು ಕೇಸು ದಾಖಲಿಸಿದ್ದು  ಮೃತದೇಹವನ್ನು ಪರಿಯಾರಂ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಇವರು ಉದಿನೂರು ಗಾನತರಂಗಿಣಿ ಸಂಗೀತ ತಂಡದ ಕಲಾವಿದರಾಗಿದ್ದರು. ಮೃತರು  ತಂದೆ, ತಾಯಿ ಸುಜಾತಾ,ಪತ್ನಿ ಸೋನು, ಪುತ್ರಿ ಸಾನ್ವಿ ಸಹೋದರಿ ಸುಧಿನ ಎಂಬಿವರನ್ನು ಅಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು