ಪೈಕ ನಿವಾಸಿಯಾದ ಯುವಕ ಬೆಂಗಳೂರಿನಲ್ಲಿ ಕುಸಿದು ಬಿದ್ದು ಮೃತ್ಯು
ಬದಿಯಡ್ಕ: ನೆಲ್ಲಿಕಟ್ಟೆ ಸಮೀಪದ ಪೈಕ ನಿವಾಸಿಯಾದ ಯುವಕ ಬೆಂಗಳೂರಿನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.. ಪೈಕ ನಿವಾಸಿಗಳಾದ ಬಾಲಕೃಷ್ಣ- ಮಲ್ಲಿಕಾ ದಂಪತಿಯ ಪುತ್ರ ಜ್ಯೋತಿಷ್ (26) ಮೃತಪಟ್ಟ ಯುವಕ.
ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಐಟಿ ಉದ್ಯೋಗಿಯಾಗಿದ್ದರು. ಬುಧವಾರ ಬೆಳಿಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ದಿಢೀರನೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಮರಳಿ ಕೆಲಸದ ಸ್ಥಳಕ್ಕೆ ತೆರಳಿದ್ದರು.ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಮೃತದೇಹವನ್ನು ಊರಿಗೆ ತಂದು ಮನೆ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಮೃತರು
ಸಹೋದರಿಯರಾದ ಮನೀಷಾ, ಕಾವ್ಯಾ, ದಿವ್ಯ ಎಂಬಿವರನ್ನು ಅಗಲಿದ್ದಾರೆ.
Tags
ಬದಿಯಡ್ಕ
