ಬೊಲ್ಕಿನಡ್ಕ ನಿವಾಸಿ ಜೇಮ್ಸ್ ಡಿಸೋಜ ನಿಧನ


ಪೆರ್ಲ : ಬೊಲ್ಕಿನಡ್ಕದ ಜೇಮ್ಸ್ ಡಿಸೋಜ (72) ಅಲ್ಪ ಕಾಲದ ಅಸೌಖ್ಯದಿಂದ ಇಂದು ಮುಂಜಾನೆ ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ನಿಧನರಾದರು. ಕೃಷಿಕರಾಗಿದ್ದ ಜೇಮ್ಸ್ ಡಿಸೋಜರು ಮಣಿಯಂಪಾರೆಯ ಸಂತ ಲಾರೆನ್ಸರ ಇಗರ್ಜಿ ನಿರ್ಮಾಣ ಸಂದರ್ಭದಲ್ಲಿ ಚರ್ಚ್ ಪಾಲನ ಸಮಿತಿ ಪದಾಧಿಕಾರಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಮೃತರು ಪತ್ನಿ ಲೂಸಿ ಡಿಸೋಜ ಮಕ್ಕಳಾದ ಸಂತೋಷ್ ಡಿಸೋಜ (ಗಲ್ಫ್ ಉದ್ಯೋಗಿ), ದಯಾ ಕಿಶೋರ್,ಸಚಿನ್,ಸೋಫಿಯ (ಧರ್ಮ ಭಗಿನಿ) ಸೊಸೆಯಂದಿರಾದ ಝೀನ ಪ್ರಿಯಾ,ವಿನಯ ಡಿಸೋಜ,ಆಶ್ವಿನಿ ಡಿಸೋಜ ಸಹೋದರ ಥೋಮಸ್ ಡಿಸೋಜ ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ (ಆ.1) ಬೆಳಿಗ್ಗೆ 11ಗಂಟೆಗೆ ಮಣಿಯಂಪಾರೆ ಇಗರ್ಜಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು