ನೀರ್ಚಾಲು : ನೀರ್ಚಾಲ್ ಮೇಲಿನ ಪೇಟೆ ನಿವಾಸಿ ಇಬ್ರಾಹಿಂ (64) ಅವರು ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ರಾಹಿಂ ಅವರನ್ನು ಕೆಲ ದಿನಗಳ ಹಿಂದೆ ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಉಸಿರಾಟದ ತೊಂದರೆಯಿಂದಾಗಿ ಅವರು ಕೊನೆಯುಸಿರೆಳೆದರು.
ಮೃತರು ಪತ್ನಿ ನಬೀಸಾ, ಪುತ್ರಿಯರಾದ ರಂಸೀನಾ, ಮರಿಯಮ್ಮ, ಸಫೀರಾ, ರಶೀದಾ, ಪುತ್ರ ನೌಫಲ್ ಅವರನ್ನು ಅಗಲಿದ್ದಾರೆ. ಇವರು ಅಡುಗೆ ಕೆಲಸ ಮಾಡುತ್ತಿದ್ದರು.
Tags
ನೀರ್ಚಾಲು
