ಮಸೀದಿಗೆ ನಮಾಜ್‌ಗೆ ತೆರಳುತ್ತಿದ್ದಾಗ ಮುಸ್ಲಿಂ ಲೀಗ್ ನಾಯಕ ಕುಸಿದು ಬಿದ್ದು ಮೃತ್ಯು


ಬದಿಯಡ್ಕ: ಮಸೀದಿಗೆ ನಮಾಜ್‌ಗೆ ತೆರಳುತ್ತಿದ್ದಾಗ ಮುಸ್ಲಿಂ ಲೀಗ್ ನಾಯಕ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಚೆಂಗಳ ಪಂಚಾಯತ್ ಮಾಜಿ ಸದಸ್ಯ ಹಾಗೂ ಪಂಚಾಯತ್ ಮುಸ್ಲಿಂ ಲೀಗ್ ಕಾರ್ಯಕಾರಿ ಸಮಿತಿ ಸದಸ್ಯ ನೆಕ್ರಾಜೆ ನಿವಾಸಿ ಕೆ.ಎನ್. ಬಡುವನ್ ಕುಂಞಿ (66) ಮೃತಪಟ್ಟವರು. ಇಂದು ಮುಂಜಾನೆ ಸುಬ್ಹಿ ನಮಾಜ್‌ಗಾಗಿ ಮಸೀದಿಗೆ ಹೋಗುತ್ತಿದ್ದಾಗ ಇವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಇಂದಿರಾ ನಗರದ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಆಯಿಷಾ, ಮಕ್ಕಳಾದ ಸಿರಾಜ್, ಸಾಬೀರಾ, ಳನೈಸ್, ಸುಮಯ್ಯಾ, ಸಬೀನಾ ಎಂಬಿವರನ್ನು ಅಗಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು