ಮೀಯಪದವು: ಪಿ.ಎನ್ ಪಣಿಕರ್ ಅವರ ಸ್ಮರಣಾರ್ಥ ಕೇರಳ ರಾಜ್ಯದ ಎಲ್ಲೆಡೆಗಳಲ್ಲಿ ನಡೆಸಲ್ಪಡುವ ವಾಚನ ದಿನವನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಳಿಂಜ ವಿದ್ಯಾಸಂಸ್ಥೆಯಲ್ಲಿ ವಾಚನಾ ಪಕ್ಷಾಚರಣೆಯಾಗಿ ಆಚರಿಸಲಾಯಿತು. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ಯು.ಕೆ ಅವರು ಅಕ್ಷರ ವೃಕ್ಷಕ್ಕೆ ಅಕ್ಷರ ಎಲೆಯನ್ನು ಪೋಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಗಿಡಗಳು ಚಿಗುರೊಡೆದು ಹೆಮ್ಮರವಾಗಿ ಬೆಳೆದು ಹೂ, ಹಣ್ಣು ಕಾಯಿ, ತಂಗಾಳಿ ನೆರಳು ನೀಡಿ ಕಲ್ಪವೃಕ್ಷವಾಗುವಂತೆ ವಿದ್ಯೆ ಕಲಿತು ಜ್ಞಾನವಂತರಾಗಿ ಉತ್ತಮ ನಾಗರಿಕರಾಗಿ ಬೆಳೆಯಬೇಕೆಂದರು. ಮಂಗಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಮಾನ್ ಅಧ್ಯಕ್ಷತೆ ವಹಿಸಿದ್ದು ಕಲಿಕೆಯ ಮಹತ್ವ ತಿಳಿಸಿ ಕೊಡುತ್ತಾ ವಿದ್ಯೆ ಬುದ್ದಿ ಕಲಿತು ಪ್ರಜ್ಞಾವಂತರಾಗಬೇಕೆಂದರು. ವೈದ್ಯ ವಿದ್ಯಾರ್ಥಿನಿ ಆಶೀನ ಹಾಗೂ ಹಿರಿಯ ಶಿಕ್ಷಕ ರಿಯಾಸ್ ಉಪಸ್ಥಿತರಿದ್ದು ಶುಭ ಹಾರೈಸಿದರು. ವಿದ್ಯಾರ್ಥಿಗಳ ಕ್ರಿಯಾತ್ಮಕ ಚಟುವಟಿಕೆಗಳ ಪ್ರದರ್ಶನ ನಡೆಯಿತು. ಶಿಕ್ಷಕಿ ರೇಷ್ಮಾ ನಿರೂಪಿಸಿದರು. ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ, ಧನ್ಯ ಪಿ. ವಿ ಧನ್ಯವಾದ ಸಮರ್ಪಿಸಿದರು.
Tags
ಉಪ್ಪಳ
