ಮುಳ್ಳೇರಿಯ: ಕೃಷಿಕನ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಂಬ್ಡಾಜೆ, ಗಾಡಿಗುಡ್ಡೆ ತಲೆಬೈಲು ನಿವಾಸಿ, ದಿವಂಗತ ಕರ್ನಲ್ ಕ್ರಾಸ್ತಾ ಮತ್ತು ಅಂಜಲೀನಾ ಕ್ರಾಸ್ತಾ ದಂಪತಿಗಳ ಪುತ್ರ ರಾಬರ್ಟ್ ಕ್ರಾಸ್ತಾ (50) ಮೃತಪಟ್ಟವರು.
ಇಂದು (ಶುಕ್ರವಾರ) ಮುಂಜಾನೆ ಇವರು ತಮ್ಮ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಕ್ಷಣವೇ ಅವರನ್ನು ಕೆಳಗಿಳಿಸಿ ಮುಳ್ಳೇರಿಯಾದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆಸ್ಪತ್ರೆಯಲ್ಲಿ ಡಾಕ್ಟರುಗಳು ತಪಾಸಣೆ ಮಾಡುವ ವೇಳೆ ಅವರು ಕೊನೆಯುಸಿರೆಳೆದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಅವಿವಾಹಿತರಾಗಿದ್ದ ರಾಬರ್ಟ್ ಕ್ರಾಸ್ತಾ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಸಾವಿಗೆ ಸಂಬಂಧಿಸಿದಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಸಹೋದರ ಸಹೋದರಿಯರಾದ ಬರ್ನಾರ್ಡ್ ಕ್ರಾಸ್ತಾ, ಹೆನ್ರಿ ಕ್ರಾಸ್ತಾ, ಹೆಲೆನ್ ಕ್ರಾಸ್ತಾ, ಪೌಲಿನ್ ಕ್ರಾಸ್ತಾ, ಫ್ಲೋರಿನ್ ಕ್ರಾಸ್ತಾ ಎಂಬಿವರನ್ನು ಅಗಲಿದ್ದಾರೆ.
