ಬದಿಯಡ್ಕ, : ಅಯೋಧ್ಯೆಯ ಶ್ರೀರಾಮಮಂದಿರ ದರ್ಶನ ಮುಗಿಸಿ ಹಿಂತಿರುತ್ತಿದ್ದ ಬದಿಯಡ್ಕ. ನಿವಾಸಿ ನಾಪತ್ತೆಯಾದ ಘಟನೆ ನಡೆದಿದೆ. ಬದಿಯಡ್ಕ ಸಮೀಪದ ಪೆರಡಾಲದ ಪಂಜಿತ್ತಡ್ಕ ನಿವಾಸಿ ರಾಜೇಶ್ (49) ನಾಪತ್ತೆಯಾದ ವ್ಯಕ್ತಿ..
ರಾಜೇಶ್ ಅವರು ಈ ತಿಂಗಳ 16ರಂದು ತಮ್ಮ ತಾಯಿಯೊಂದಿಗೆ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದರು. ದೇವರ ದರ್ಶನ ಮುಗಿಸಿ ಜುಲೈ 21ರಂದು ಊರಿಗೆ ಮರಳುವ ಪ್ರಯಾಣ ಆರಂಭಿಸಿದ್ದರು. ಜುಲೈ 22ರಂದು ಮಧ್ಯಪ್ರದೇಶದ ಇಟಾರ್ಸಿ (Itarsi) ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದರು.
ಈ ವೇಳೆ ತಾಯಿಯನ್ನು ನಿಲ್ದಾಣದಲ್ಲೇ ಬಿಟ್ಟು ಮತ್ತೊಂದು ರೈಲಿಗೆ ಹತ್ತಿದ ರಾಜೇಶ್ ಬಳಿಕ ನಾಪತ್ತೆಯಾಗಿದ್ದಾರೆ. ನಂತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಅವರ ತಾಯಿಯನ್ನು ಸುರಕ್ಷಿತವಾಗಿ ಊರಿಗೆ ಕರೆತರಲಾಯಿತು.
ರಾಜೇಶ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಇದುವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.
ಈ ಕುರಿತು ರಾಜೇಶ್ ಅವರ ಸಹೋದರ ಅನಿಲ್ ಅವರು ಮಧ್ಯಪ್ರದೇಶ ಪೊಲೀಸ್ ಹಾಗೂ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜೇಶ್ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಈ ಸಂಖ್ಯೆಗಳಿಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ:
📞 04998 284033
📞 8848543989
Tags
ಬದಿಯಡ್ಕ

