ಕಿಳಿಂಗಾರು ಶಾಲೆಯಲ್ಲಿ ವಾಚನಾ ಮಾಸಾಚರಣೆ ಸಮಾರೋಪ


 ನೀರ್ಚಾಲು:   ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ   ವಾಚನಾ ಮಾಸಾಚರಣೆ ಸಮಾರೋಪ ಹಾಗೂ ಬಾಲಸಭೆ ಜರಗಿತು . ಕಾರ್ಯಕ್ರಮದದ

ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ ನಾರಾಯಣ ಪೆರಡಾಲ  ಇವರು ಮಕ್ಕಳ ಹಸ್ತಪತ್ರಿಕೆ *ಕಾನನ* ವನ್ನು  ಬಿಡುಗಡೆಗೊಳಿಸಿ ಮಾತನಾಡಿದರು .

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ವಿಷ್ಣು ಪ್ರಕಾಶ್ ಪೆರ್ವ ಅಧ್ಯಕ್ಷತೆ ವಹಿಸಿದರು.

ಮಾತೃಸಂಘದ ಅಧ್ಯಕ್ಷೆ ಪ್ರೀತಾ ಕಿಳಿಂಗಾರು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಹಾಗೂ ಅಧ್ಯಾಪಕ ಅಧ್ಯಾಪಿಕೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು . ವಾಚನಾ ಮಾಸಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು . ಶಾಲಾ

ವಿದ್ಯಾರ್ಥಿನಿ ಸಾನ್ವಿ ಸ್ವಾಗತಿಸಿ    ಪ್ರತೀಕ್ಷಾ ವಂದಿಸಿದರು .    ಕಾರ್ಯಕ್ರಮವನ್ನು  ವೈಷ್ಣವ್ ಭಟ್ ಹಾಗೂ ವೈಶಾಲಿ ಕೆ ಯಂ ನಿರೂಪಿಸಿದರು.

ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು