ದುರಸ್ತಿ ಕೆಲಸದ ವೇಳೆ ವಿದ್ಯುತ್ ಶಾಕ್ ತಗುಲಿ ಲೈನ್‌ಮ್ಯಾನ್ ಮೃತ್ಯು

 


ಕಾಞಂಗಾಡ್: ಮಡಿಕೈ ಕಣಿಚ್ಚಿರದಲ್ಲಿ ವಿದ್ಯುತ್ ಲೈನ್ ದುರಸ್ತಿ ಕಾರ್ಯ ಕೈಗೊಳ್ಳುತ್ತಿದ್ದ ವೇಳೆ ಶಾಕ್ ತಗುಲಿ ಕೆ.ಎಸ್.ಇ.ಬಿ (KSEB) ಲೈನ್‌ಮ್ಯಾನ್  ಸಾವನ್ನಪ್ಪಿದ ಘಟನೆ ನಡೆದಿದೆ. ಕೆ.ಎಸ್.ಇ.ಬಿ ಮಾವುಕಾಲ್ ಸೆಕ್ಷನ್‌ನ ಲೈನ್‌ಮ್ಯಾನ್ ಹಾಗೂ ಪುಲ್ಲೂರು ಮಧುರಂಪಾಡಿ ನಿವಾಸಿ ಭರತನ್ ಮೃತಪಟ್ಟ ದುರ್ದೈವಿ.

ಇಂದು (ಶುಕ್ರವಾರ) ಬೆಳಿಗ್ಗೆ  10 ಗಂಟೆಯ ವೇಳೆ ಈ ಅಪಘಾತ ಸಂಭವಿಸಿದೆ. ಪ್ರದೇಶದಲ್ಲಿ ಲೈನ್ ದುರಸ್ತಿ ಕೆಲಸ ಮಾಡುತ್ತಿದ್ದಾಗ ಭರತನ್ ಅವರಿಗೆ ವಿದ್ಯುತ್ ಶಾಕ್ ತಗುಲಿದೆ. ಅಪಘಾತದ ನಂತರ ದೀರ್ಘಕಾಲದವರೆಗೆ ವಿದ್ಯುತ್ ಕಂಬದ ತಂತಿಯಲ್ಲೇ ಸಿಲುಕಿಕೊಂಡಿದ್ದ ಮೃತದೇಹವನ್ನು ಕಾಞಂಗಾಡ್‌ನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೆಳಗಿಳಿಸಿದರು.

ಮೃತದೇಹವನ್ನು ಮುಂದಿನ ಕ್ರಮಗಳಿಗಾಗಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು