ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ನೂತನ ಲಾಂಡ್ರಿ ಕಟ್ಟಡಕ್ಕೆ ಶಿಲಾನ್ಯಾಸ

ಕಾಸರಗೋಡು: ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ವತಿಯಿಂದ ನೆಲ್ಲಿಕಟ್ಟೆ ಸಾಲತ್ತಡ್ಕದಲ್ಲಿ ನೂತನವಾಗಿ ಆರಂಭಿಸಲಿರುವ ಲಾಂಡ್ರಿ ಕಟ್ಟಡದ ಶಿಲಾನ್ಯಾಸವನ್ನು ಉದುಮ ಮಾಜಿ ಶಾಸಕ ಅಡ್ವ. ಸಿ. ಎಚ್. ಕುಂಞಂಬು ನೆರವೇರಿಸಿದರು.

ಸಂಘದ ಅಧ್ಯಕ್ಷ ಪಿ. ರಘುದೇವನ್ ಮಾಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತ ಅಜಕೋಡು ಮುಖ್ಯ ಅತಿಥಿಯಾಗಿದ್ದರು.

ವಾರ್ಡ್ ಸದಸ್ಯೆ ರಮ್ಸೀನಾ ಅಶ್ರಫ್, ಸರ್ಕಲ್ ಸಹಕಾರಿ ಸಂಘದ ಅಧ್ಯಕ್ಷ ಕೆ. ಆರ್. ಜಯಾನಂದ, ಮಾಜಿ ಪಂಚಾಯತ್ ಸದಸ್ಯರಾದ ಗಿರೀಶನ್, ವೇಣುಗೋಪಾಲನ್ ಹಾಗೂ ಬಿ. ಆರ್. ಗೋಪಾಲನ್, ಸಿ. ಎ. ಸುಬೈರ್, ಟಿ. ನಾರಾಯಣನ್, ಭರತ ಕುಮಾರನ್ ಮೊದಲಾದವರು ಶುಭ ಹಾರೈಸಿದರು. ಸಂಘದ ಕಾರ್ಯದರ್ಶಿ ಕೆ. ಪ್ರದೀಪ್ ವರದಿ ಮಂಡಿಸಿದರು. ಉಪಾಧ್ಯಕ್ಷೆ ಎಂ. ಸುಮತಿ ಸ್ವಾಗತಿಸಿದರೆ, ನಿರ್ದೇಶಕ ಟಿ. ಎಂ. ಎ. ಕರೀಂ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು