ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ಸಮಾಲೋಚನಾ ಸಭೆ


  ಬದಿಯಡ್ಕ:  ಕಾಸರಗೋಡು ಜಿಲ್ಲಾ ಸಮಿತಿಯ ನಿರ್ದೇಶದಂತೆ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ಒಂದು ಸಮಾಲೋಚನಾ ಸಭೆಯನ್ನು ಬದಿಯಡ್ಕ ಮಂಡಲ ಕಚೇರಿಯಲ್ಲಿ ಕರೆಯಲಾಯಿತು. ಸಭೆಯ ಅಧ್ಯಕ್ಷತೆಯನ್ನು ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ವಹಿಸಿದ್ದರು. ಕಾರಡ್ಕ ಬ್ಲೋಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋಪಕುಮಾರ್ ಉಧ್ಘಾಟಿಸಿದರು. ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈ , ಕಾರಡ್ಕ ಬ್ಲೋಕು ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರುಗಳಾದ ನಾರಾಯಣ ಮಣಿಯಾಣಿ ನೀರ್ಚಾಲು, ಖಾದರ್ ಮಾನ್ಯ , ಮಂಡಲ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರುಗಳಾದ ಜಗನ್ನಾಥ ರೈ, ಕೃಷ್ಣದಾಸ್ ದರ್ಬೆತ್ತಡ್ಕ , ಬ್ಲೋಕು ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಗಳಾದ ರಾಮ ಪಟ್ಟಾಜೆ, ಶಾಫಿ ಗೋಳಿಯಡ್ಕ , ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ , ನಿರಂಜನ ರೈ ಮೊದಲಾದವರು ಮಾತನಾಡಿದರು. ಜನಪ್ರತಿನಿಧಿಗಳಾದ ಅಶ್ವತಿ ಅಶೋಕನ್ , ಲೀಲಾವತಿ ಕುಂಟಾಲು ಮೂಲೆ , ಮಾಜಿ ಜನಪ್ರತಿನಿಧಿ ಅನಸೂಯ, ಮಂಡಲ ಕಾರ್ಯದರ್ಶಿಗಳಾದ ರವೀಂದ್ರ ಕುಂಟಾಲು ಮೂಲೆ , ರಾಮಕೃಷ್ಣನ್ , ಶಾಫಿ ಗೋಳಿಯಡಿ ಹಾಗೂ ಬ್ಲೋಕು , ಮಂಡಲ , ವಾರ್ಡು ಕಾಂಗ್ರೆಸ್ ಸಮಿತಿಯ ನೇತಾರರು , ಕಾರ್ಯಕರ್ತರು ಉಪಸ್ಥಿತರಿದ್ದರು.  ರಾಜ್ಯದಲ್ಲಿ  ಇದೀಗ ಯುಡಿಎಫ್ ಸರಕಾರ ಆಡಳಿತ ನಡೆಸುತ್ತಿದೆ  ಕಾಂಗ್ರೆಸಿನ  ಕಾರ್ಯಕರ್ತರು ಬಹು ಉತ್ಸಾಹದಿಂದ ಕಾರ್ಯಪ್ರವರ್ತನಕ್ಕೆ ಇಳಿಯಬೇಕು, ಸರಕಾರವು ಪ್ರಕಟಗೊಳಿಸುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಆಗಬೇಕೆಂಬ ಅದೇಶವನ್ನು ಸಭೆಯಲ್ಲಿ ನೀಡಲಾಯಿತು. 

ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘಟನೆ (ಐಎನ್ ಟಿಯುಸಿ)ಯ ಜಿಲ್ಲಾ ಸಮಿತಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಲೀಲಾವತಿ ಪಟ್ಟಾಜೆಯವರನ್ನು ಶಾಲು ಹಾಕಿ ಗೌರವಿಸಲಾಯಿತು. ಲೋಹಿತಾಕ್ಷನ್ ಪಟ್ಟಾಜೆ ಸ್ವಾಗತಿಸಿ , ಕುಮಾರನ್ ನಾಯರ್ ಧನ್ಯವಾದವಿತ್ತರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು