ಹವ್ಯಕ ಗುಂಪೆ ವಲಯ ಸಮಿತಿ ಆಶ್ರಯದಲ್ಲಿ ಸ್ವರ್ಣ ಪಾದುಕೆಯ ಮೂರನೇ ಆವೃತ್ತಿಯ ಸವಾರಿ ಸಂಪನ್ನ


 ಬದಿಯಡ್ಕ:  ಶಿಷ್ಯರ ಹಿತಕ್ಕಾಗಿ ನಮ್ಮ ಶ್ರೀಗುರುಗಳು ಹೊಸದಾಗಿ ಕರುಣಿಸಿದ ಸುವರ್ಣ ಸವಾರಿಯ ಮೂರನೇ ಆವೃತ್ತಿಯ ಗುಂಪೆ ವಲಯದ  ಸ್ವರ್ಣ ಪಾದುಕಾ ಪೂಜೆಗಳು  ಶ್ರದ್ಧಾಭಕ್ತಿ ಗೌರವಪೂರ್ವಕ ಸಂಭ್ರಮ್ಮೋಲ್ಲಾಸಗಳಿಂದ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಮೊದಲ ದಿನ ಸಾಯಂಕಾಲ 6 ಗಂಟೆಯ ಹೊತ್ತಿಗೆ ಪಳ್ಳತ್ತಡ್ಕ  ವಲಯದಿಂದ ಆಗಮಿಸಿದ ದಿವ್ಯ ಸ್ವರ್ಣ ಪಾದುಕೆಗಳನ್ನು ಹೊತ್ತ ಭವ್ಯ ಬೆಳ್ಳಿ ಪಲ್ಲಕ್ಕಿಯನ್ನು  ಕೇಶವ ಭಟ್ ಕಾಡಮನೆ ಶ್ರಾವಣಕೆರೆ ಅವರ ವಸತಿ ಮನೆಯಲ್ಲಿ ಆದರದಿಂದ  ಸ್ವಾಗತಿಸಲಾಯಿತು.

   ಮುಳ್ಳೇರಿಯ ಮಂಡಲದ, ಮತ್ತು ಇತರ ವಲಯಗಳ ಪದಾಧಿಕಾರಿಗಳು ಹಾಗೂ ಘಟಕಗಳ ಗುರಿಕ್ಕಾರರುಗಳು ಹಾಜರಿದ್ದರು.ಮಾತೆಯರು ಕುಂಕುಮಾರ್ಚನೆ,ಭಜನೆ ಹಾಗೂ ಗುರುಪಾದುಕಾ ಸ್ತೋತ್ರವನ್ನು ಸಮೂಹಿಕವಾಗಿ ಪಠಿಸಿದರು.

ಪೂಜ್ಯರಾದ ಆಚಾರ-ವಿಚಾರ ಗಜಾನನ ಭಟ್ಟರ ನೇತೃತ್ವದಲ್ಲಿ ಧೂಳೀಪೂಜೆ, ಮಹಾಮಂಡಲ ಗುರುಕುಲ ಪ್ರಕಲ್ಪ ಸಂಯೋಜಕರಿಂದ ಪ್ರಾಸ್ತಾವಿಕ.ಗುರುಗಳ ಸಂದೇಶ ವನ್ನು ಕೇಳಿಸಲಾಯಿತು.

ಮಂಡಲದ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ  ಅವರು ಪ್ರಸ್ತಾವಿಕವಾಗಿ ಮಾತನಾಡಿ ಸ್ವರ್ಣಪಾದುಕಾ ಸವಾರಿಯ ಮಹತ್ವವನ್ನು ಮನಮುಟ್ಟುವ ಹಾಗೆ ತಿಳಿಸಿದರು. 

ಮರುದಿನ ಮನೆ-ಮನೆ ಸವಾರಿ ಬೆಳಿಗ್ಗೆ 7:00 ಕ್ಕೆ ಆರಂಭಗೊಂಡು 10:45ರವರೆಗೆ‌  ಶ್ರೀಕೃಷ್ಣ ಉದನೇಶ್ವರ ಭಟ್ ಮಡ್ವ,ಮಹಾಲಿಂಗ ಭಟ್ ಕಠಾರ, ಶ್ಯಾಮಪ್ರಕಾಶ ಪುಣಿಯೂರು,ಸತ್ಯನಾರಾಯಣ ಕಿದೂರು,ಅವರ  ಮನೆಗಳಲ್ಲಿ ಪೂಜೆಗಳು ನಡೆದುವು. ನಂತರ ವಸತಿ ಮನೆಯಲ್ಲಿ ಭಿಕ್ಷಾ ಸೇವೆ ಹಾಗೂ ಸ್ವರ್ಣ ಪಾದುಕಾ ಪೂಜೆಗಳು ಸಂಪನ್ನಗೊಂಡವು. 

ಮಧ್ಯಾಹ್ನ ಭೋಜನದ ನಂತರ 2:45ಕ್ಕೆ ಮನೆ ಮನೆ ಸವಾರಿಯ ಮುಂದಿನ ಭಾಗವಾಗಿ ಮಹಾಬಲ ಭಟ್ ಕಿದೂರು, ನಾರಾಯಣ ಹೆಬ್ಬಾರ ಶ್ರಾವಣಕೆರೆ, ಕೃಷ್ಣ ಹೆಬ್ಬಾರ ಶ್ರಾವಣಕೆರೆ ಅವರ ನಿವಾಸಗಳಿಗೆ ಭೇಟಿ ನೀಡಿ ಪೂಜೆ ನೆರವೇರಿಸಿ ಮುಂದಿನ ಕುಂಬಳೆ ವಲಯಕ್ಕೆ ಬೀಳ್ಕೊಡಲಾಯಿತು.      ಮಂಡಲ ಪದಾಧಿಕಾರಿಗಳು ಹಾಗೂ ವಲಯದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ  ಪ್ರಮುಖ ಪದಾಧಿಕಾರಿಗಳೂ ಸಂಚಾರದ ಜತೆಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು