ಕುಂಟಿಕಾನ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ


  ನೀರ್ಚಾಲು: ಅನುದಾನಿತ ಹಿರಿಯ ಬುನಾದಿ ಶಾಲೆ ಕುಂಟಿಕಾನದಲ್ಲಿ ರಕ್ಷಕ ಶಿಕ್ಷಕ ಸಂಘ ಹಾಗೂ ಮಾತೃ ಸಂಘದ ಮಹಾಸಭೆಯು ಇತ್ತೀಚೆಗೆ ಜರಗಿತು. ಸಭಾಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಕಮರುದ್ದೀನ್ ಪಾಡಲಡ್ಕರವರು ವಹಿಸಿದ್ದರು. ಶಾಲಾ ವ್ಯವಸ್ಥಾಪಕರಾದ ಶಂಕರನಾರಾಯಣ ಶರ್ಮ  ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಖಾಲಿದ್ ಬಾಪಾಲಿಪನಂ, ಅಧ್ಯಾಪಕರಾದ ಶರತ್ ಕುಮಾರ್ ಹಾಗೂ ಶ್ರೀಮತಿ ದಿನ ಟೀಚರ್ ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ತಾಹಿರ ಮಾಡತ್ತಡ್ಕ,ಮಾತೃ ಸಂಘದ ಉಪಾಧ್ಯಕ್ಷೆ ಶ್ರೀಮತಿ  ಶೀಬ ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ನೂತನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಅಬ್ಬಾಸ್ ಎಂ, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್, ಮಾತೃ ಸಂಘದ ಅಧ್ಯಕ್ಷೆ ಯಾಗಿ ಶ್ರೀಮತಿ ವರ್ಷ ಮಾಡತ್ತಡ್ಕ,ಉಪಾಧ್ಯಕ್ಷೆಯಾಗಿ ತಾಹಿರಾ ಮಾಡತ್ತಡ್ಕರನ್ನು ಆರಿಸಲಾಯಿತು. ಭಾರತಿ ಟೀಚರ್ ಪ್ರಾರ್ಥನೆ ಹಾಡಿದ ಕಾರ್ಯಕ್ರಮಕ್ಕೆ ಮುಖ್ಯೋಪಾಧ್ಯಾಯರಾದ ಪ್ರಶಾಂತ ಕುಮಾರ್ ಕೆ ಸ್ವಾಗತಿಸಿದರು. ಅಧ್ಯಾಪಕರಾದ ಪ್ರಶಾಂತ ಕುಮಾರ್ ಬಿ ಹಾಗೂ ಅಬ್ದುಲ್ ಸಲಾಂ  ನಿರೂಪಿಸಿದರೆ, ಕೊನೆಯಲ್ಲಿ ಸ್ಟಾಫ್ ಸೆಕ್ರೆಟರಿ ಸುಭಾಷ್ ಇ ಕೆ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು