ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕನಾಗಿ ಭಾರತೀಯ ಜನತಾ ಯುವಮೋರ್ಚಾ ಕುಂಬ್ಳೆ ಪಂಚಾಯತ್ ಸಮಿತಿಯ ಉಪಾಧ್ಯಕ್ಷರಾಗಿದ್ದ ಕಾರ್ಯಕರ್ತರ ಕಣ್ಮಣಿ ತಾನರಿಯದ ತಪ್ಪಿಗೆ ತನ್ನ ಜೀವನವನ್ನು ಕೊನೆಗೊಳಿಸಿ ಸಾವಿರಾರು ಕಾರ್ಯಕರ್ತರ ಹೃದಯದಲ್ಲಿ ಸ್ಥಾನವನ್ನು ಪಡೆದು ಇಹಲೋಕ ತ್ಯಜಿಸಿದ ಪ್ರೀತಿಯ ಸಹೋದರ ಗೆಳೆಯ ರಾಜೇಶ್ ಕುಟ್ಟ ಬಾಂಬ್ರಾಣ ಅವರ 3 ನೆಯ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸ್ವಾಗತ್ ಕ್ಲಬ್ ನಲ್ಲಿ ರಾಜೇಶ್ ಕುಟ್ಟ ಅವರ ಭಾವಚಿತ್ರಕ್ಕೆ ಭಾರತೀಯ ಜನತಾ ಪಕ್ಷದ ಉತ್ತರ ವಲಯ ಉಪಾಧ್ಯಕ್ಷರಾದ ಶ್ರೀ ರಾಜೇಶ್ ರೈ ಉಜಾರು ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಿದರು. ಬಿಜೆಪಿ ಕುಂಬ್ಳೆ ಮಂಡಲ ಕಾರ್ಯದರ್ಶಿ ಪ್ರದೀಪ್ ಕುಮಾರ್ ಆರಿಕ್ಕಾಡಿ ಮಾತನಾಡಿದರು.ಬಿಜೆಪಿ ಕಾರ್ಯಕರ್ತರು,ವಿವಿಧ ಕ್ಲಬ್ ನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು🙏
Tags
ಕುಂಬಳೆ
