ನಾರಂಪಾಡಿ: ಭಾರತೀಯ ಮಜ್ದೂರ್ ಸಂಘದ ಸ್ಥಾಪನಾ ದಿನದ ಅಂಗವಾಗಿ ಬಿ.ಎಂ.ಎಸ್. ನಾರಂಪಾಡಿ ಘಟಕದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಭಟ್ ಅವರು ಧ್ವಜಾರೋಹಣ ನೆರವೇರಿಸಿದರು. ಘಟಕದ ಅಧ್ಯಕ್ಷ ಗಿರೀಶ್ ಮುಂಡೋಳ್ಮೂಲೆ ಅಧ್ಯಕ್ಷತೆ ವಹಿಸಿದರು.
ಬಳಿಕ ಪ್ರಕಾಶ್ ಪಾವೂರು ಅವರು ಸ್ಥಾಪನಾ ದಿನದ ಸಂದೇಶ ನೀಡಿ ಮಾತನಾಡಿ, ಬಿ.ಎಂ.ಎಸ್.ನ ಸಂಘಟನಾ ಕಾರ್ಯಚಟುವಟಿಕೆಗಳು ಹಾಗೂ ಕಾರ್ಮಿಕರ ಕಲ್ಯಾಣಕ್ಕಾಗಿ ಸಂಘ ನಡೆಸುತ್ತಿರುವ ಸೇವಾ ಕಾರ್ಯಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಹರೀಶ್ ನಾರಂಪಾಡಿ, ಉದಯ ನೆಲ್ಯಡ್ಕ, ವಸಂತ ಬೆಳ್ಳಿಗೆ ಅವರು ಭಾಗವಹಿಸಿದ್ದರು. ಹರೀಶ್ ಮುಂಡೋಳ್ಮೂಲೆ ಸ್ವಾಗತಿಸಿ, ಸುರೇಶ್ ಮುಂಡೋಳ್ಮೂಲೆ ವಂದಿಸಿದರು.
Tags
ಬದಿಯಡ್ಕ
