ಬಿಜೆಪಿಯಿಂದ ಕಾಂಗ್ರೆಸಿಗೆ ಎಂಬ ಹೇಳಿಕೆಯು ಸತ್ಯಕ್ಕೆ ದೂರ:- ಬಿಜೆಪಿ ಬದಿಯಡ್ಕ ಪಂಚಾಯತು ಸಮಿತಿ


 ಬದಿಯಡ್ಕ :- ಬಣ್ಪುತ್ತಡ್ಕದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಏಳನೇ ವಾರ್ಡಿನಿಂದ ಮನೋಜ್ ಎಂಬ ವ್ಯಕ್ತಿಯು ಬಿಜೆಪಿಯಿಂದ  ಕಾಂಗ್ರೆಸ್ ಗೆ ಎಂಬ ರೀತಿಯಲ್ಲಿ ಶಾಲು ಹಾಕಿ ಸ್ವೀಕರಿಸಿದ ಕಾಂಗ್ರೆಸ್ ಮಂಡಲಾಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅವರ ಕ್ರಮವು ಹಾಸ್ಯಾಸ್ಪದವಾಗಿದೆಯೆಂದು ಬಿಜೆಪಿ ಬದಿಯಡ್ಕ ಪಂಚಾಯತ್ ಸಮಿತಿ ಅಧ್ಯಕ್ಷ ಉದನೇಶ್ವರ ಬಿ, ಪ್ರಧಾನ ಕಾರ್ಯದರ್ಶಿ ಶರತ್ ಕುಮಾರ್ ಶೆಟ್ಟಿ ಜಂಟಿ ಹೇಳಿಕೆಯಲ್ಲಿ ಖಂಡಿಸಿದ್ದಾರೆ. ಇದು ನಾಚಿಕೆಗೇಡಿ ಕ್ರಮವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಹದಿನೈದು ವರುಷದಿಂದ ಕಾಂಗ್ರೆಸ್ ಗಾಗಿ ದುಡಿಯುತ್ತಿರುವ ವ್ಯಕ್ತಿಯನ್ನು ಬಿಜೆಪಿಯ ವ್ಯಕ್ತಿಯೆಂದು ಹೇಳುತ್ತಿರುವುದು ಸತ್ಯಕ್ಕೆ ದೂರವೆಂದೂ, ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಹೊಂದಿರದ ವ್ಯಕ್ತಿಯು ಬಿಜೆಪಿಯ ಕಾರ್ಯಕರ್ತ ಹೇಗೆ ಆಗುವುದೆಂದು ಬಿಜೆಪಿ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು