ಬದಿಯಡ್ಕ:-ಬಿಜೆಪಿ ಬದಿಯಡ್ಕ ಪಂಚಾಯತ್ ಸಮಿತಿಯ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಡಾ! ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 125 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಬದಿಯಡ್ಕ ಪಂಚಾಯತ್ ಅಧ್ಯಕ್ಷ ಡಿ ಶಂಕರ ಅವರು ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಗೆಯ್ಯುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತ ನಾರಾಯಣ ಮಾಸ್ಟರ್ ಮೈರ್ಕಳ, ಪಂಚಾಯತ್ ಉಪಾಧ್ಯಕ್ಷೆ ಅಶ್ವಿನಿ ಕೆಯಂ, ಎಸ್ ಟಿ ಮೋರ್ಚಾ ರಾಜ್ಯ ಸಮಿತಿ ಸದಸ್ಯರಾದ ಈಶ್ವರ ಮಾಸ್ಟರ್ , ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕಡಾರು, ವಿದ್ಯಭ್ಯಾಸ, ಆರೋಗ್ಯ ಸ್ಥಾಯಿ ಸಮಿತಿ ಚೇಯರ್ ಮೇನ್ ಅವಿನಾಶ್ , ಗಂಗಾಧರ ಪಳ್ಳತ್ತಡ್ಕ, ಶರತ್ ಕುಮಾರ್, ಡಿಕೆ ನಾರಾಯಣ ನಾಯರ್ ಎಂಬಿವರು ಮಾತನಾಡಿದರು. ನಾರಾಯಣ ಪಿ ಪೆರಡಾಲ ಸ್ವಾಗತಿಸಿ, ಆನಂದ ಕೆ ವಂದಿಸಿದರು.
Tags
ಬದಿಯಡ್ಕ
