ಒಬಿಸಿ ಮೋರ್ಚಾ ಆಶ್ರಯದಲ್ಲಿ ಫಿಶರೀಸ್ ಕಚೇರಿ ಮುಂದೆ ಧರಣಿ, ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್.ಉದ್ಘಾಟನೆ


ಕಾಸರಗೋಡು: ಎಲ್‌ಡಿಎಫ್ ಅಧಿಕಾರದಲ್ಲಿದ್ದರೂ, ಯುಡಿಎಫ್ ಅಧಿಕಾರದಲ್ಲಿದ್ದರೂ ಕೇರಳದ ಮೀನುಗಾರರಿಗೆ ಟ್ರೋಲಿಂಗ್ ನಿಷೇಧದ ಅವಧಿಯು ಕಷ್ಟದ ಕಾಲವೇ (ಪಂಜಮಾಸ) ಆಗಿದೆ. ಅವರಿಗೆ ಸಿಗಬೇಕಾದ ಪೆನ್ಷನ್ ಮತ್ತು ರೇಷನ್ ವಿಳಂಬವಾಗುವುದು ಇಲ್ಲಿ ನಿರಂತರ ಪ್ರಕ್ರಿಯೆಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದ್ದಾರೆ.

ಒಬಿಸಿ ಮೋರ್ಚಾ ಜಿಲ್ಲಾ ಸಮಿತಿಯು ಕಾಸರಗೋಡು ಫಿಶರೀಸ್ ಕಚೇರಿ ಎದುರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.



ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ನರೇಂದ್ರ ಮೋದಿ ಸರ್ಕಾರವು ಮೀನುಗಾರರ ಸುರಕ್ಷತೆ ಮತ್ತು ಕಲ್ಯಾಣವನ್ನು ಅನುಷ್ಠಾನಗೊಳಿಸುತ್ತಿದ್ದರೆ, ರಾಜ್ಯ ಸರ್ಕಾರಕ್ಕೆ ಅವರಿಗೆ ಸಿಗಬೇಕಾದ ಅರ್ಹ ಸೌಲಭ್ಯಗಳನ್ನು ಸಹ ಒದಗಿಸಲು ಸಾಧ್ಯವಾಗುತ್ತಿಲ್ಲ." ಎಂದು ಅವರು ಟೀಕಿಸಿದರು.

70 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಸರಗೋಡು ಬಂದರಿನ ಅಭಿವೃದ್ಧಿ ಪೂರ್ಣಗೊಂಡರೆ, ಮೀನುಗಾರರು ಇನ್ನಷ್ಟು ಸುರಕ್ಷಿತವಾಗಿ ಮೀನುಗಾರಿಕೆ ನಡೆಸಬಹುದು ಮತ್ತು ಅವರ ಆದಾಯವೂ ಹೆಚ್ಚಾಗಲಿದೆ ಎಂದು ಅಶ್ವಿನಿ ಇದೇ ವೇಳೆ ತಿಳಿಸಿದರು.

ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವತ್ಸರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರುಗಳಾದ ವಿ. ರವೀಂದ್ರನ್,  ಸತೀಶ್ ಚಂದ್ರ ಭಂಡಾರಿ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭಗೀಶ್ ಪೂರಾಡನ್, ಕೆ. ಶೈಬು, ಇತರರಾದ ಪಿ.ಆರ್. ಸುನಿಲ್, ದಯಾನಂದ ಕುಲಾಲ್,  ಟಿ.ವಿ. ಮುರಳಿ ಕುಮಾರ್, ಸುಕುಮಾರ್ ಕುದ್ರೆಪ್ಪಾಡಿ,ಕೆ.ಎಸ್. ರಮಣಿ, ಅಶೋಕ್ ಚೆಟ್ಟಿಯಾರ್ ಮೊದಲಾದವರು ನೇತೃತ್ವ ವಹಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು