ಮುಳ್ಳೇರಿಯ: ಬಿಜೆಪಿಯ ಮೂರು ಮಂದಿ ಶಾಸಕರು ಬ್ರಹ್ಮ, ವಿಷ್ಣು, ಮಹೇಶ್ವರರಂತೆ ಕೇರಳ ವಿಧಾನ ಸಭೆಯಲ್ಲಿ ಕಾರ್ಯಾಚರಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ.ಪದ್ಮನಾಭನ್ ಹೇಳಿದರು. ಅವರು ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಬದಿಯಡ್ಕ ಮಂಡಲ ಪ್ರಶಿಕ್ಷಣ ಮಹಾಭಿಯಾನವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನಂತರ ಈ ರೀತಿ ಹೇಳಿದರು. ಜನಸಂಘದ ಕಾಲದಿಂದಲೂ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳು ನಡೆಯುತ್ತಿದೆ. ಅದು ಇಂದು ಸಹ ಮುಂದುವರಿದಿದೆ. ಇಂದಿರಾಗಾಂಧಿ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯು ಕೇವಲ ಎರಡು ಸ್ಥಾನಗಳನ್ನು ಪಡೆದುಕೊಂಡಿತ್ತು. ಅನಂತರ ಪಕ್ಷವು 5 ದಿನಗಳ ಅಧ್ಯಯನ ಶಿಬಿರ ನಡೆಸಿ ಮುಂದಿನ ಹೋರಾಟಗಳ ಬಗ್ಗೆ ನಿರ್ದರಿಸಿತು. ಈ ರೀತಿ ಕಾರ್ಯಕರ್ತರ ನಿರಂತರ ಕಠಿಣ ಶ್ರಮದ ಫಲವೇ ಇಂದು ಬಿಜೆಪಿ ಹೆಮ್ಮರವಾಗಲು ಕಾರಣ ಎಂದವರು ಹೇಳಿದರು.
ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ. ಅಧ್ಯಕ್ಷತೆ ವಹಿಸಿದರು. ಶಿಬಿರಾಧಿಕಾರಿ ಮಣಿಕಂಠ ರೈ, ಸುಧಾಮ ಗೋಸಾಡ, ಶಿವಕೃಷ್ಣ ಭಟ್, ಸುಕುಮಾರ ಕುದ್ರೆಪಾಡಿ, ಹರೀಶ್ ನಾರಂಪಾಡಿ, ಶಂಕರ.ಡಿ ಬದಿಯಡ್ಕ, ಜನನಿ ಕಾರಡ್ಕ, ಯಶೋಧ ಕುಂಬ್ಡಾಜೆ, ಮಾಲಿನಿ ಬೆಳ್ಳೂರು, ಅಶ್ವಿನಿ ಕೆ.ಎಂ, ವಸಂತ ಕೆ, ಶ್ರೀಧರ ಬೆಳ್ಳೂರು, ಮುರಳೀಧರ ಯಾದವ್ ಮೊದಲಾದವರು ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಸ್ವಾಗತಿಸಿ ಮಂಡಲ ಕಾರ್ಯದರ್ಶಿ ಅವಿನಾಶ್ ವಿ.ರೈ ವಂದಿಸಿದರು. ನಾಳೆ(ಆದಿತ್ಯವಾರ) ಸಂಜೆ 5 ಗಂಟೆಗೆ ಪ್ರಶಿಕ್ಷಣ್ ಮಹಾಭಿಯಾನ್ ಮುಕ್ತಾಯವಾಗಲಿದೆ.
Tags
ಮುಳ್ಳೇರಿಯ
