ಮುಳ್ಳೇರಿಯ: ಹಿರಿಯರ ಕಠಿಣ ಪ್ರಯತ್ನ ಹಾಗೂ ದೂರದರ್ಶೀ ನಿರ್ದಾರದಿಂದಾಗಿ ಬಿಜೆಪಿ ಪಕ್ಷವು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆಯೆಂದು ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಎಂ.ಸಂಜೀವ ಶೆಟ್ಟಿ ಹೇಳಿದರು.ಅವರು ಬಿಜೆಪಿ ಬದಿಯಡ್ಕ ಮಂಡಲ ಸಮಿತಿಯ ಆಶ್ರಯದಲ್ಲಿ ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆದ 24 ಗಂಟೆಗಳ ಕಾಲ ನಡೆದ ಪ್ರಶಿಕ್ಷಣ ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಬೂತು ಮಟ್ಟದಲ್ಲಿ ಸಕ್ರಿಯರಾಗುವ ಮೂಲಕ ಜನರ ಅಹವಾಲುಗಳಿಗೆ ಸ್ಪಂದಿಸುವ ಅಗತ್ಯವಿದೆ. ಇಂತಹ ಚಟುವಟಿಕೆಗಳಿಂದಾಗಿಯೇ ಪಕ್ಷವು ರಾಜ್ಯದಲ್ಲಿ ಮೂರು ಮಂದಿ ಶಾಸಕರರನ್ನು ಹೊಂದಿದೆ. ಅದು ಮುಂದೆ ಹತ್ತು ಪಾಲು ಹೆಚ್ಚಾಗಲಿದೆ ಎಂದವರು ಹೇಳಿದರು.
ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ.ಅಧ್ಯಕ್ಷತೆ ವಹಿಸಿದರು. ಸುಧಾಮ ಗೋಸಾಡ, ಸುನಿಲ್ ಪಿ.ಆರ್, ಮಣಿಕಂಠ ರೈ, ಶಿವಕೃಷ್ಣ ಭಟ್,ಶಂಕರ ಡಿ, ಹರೀಶ್ ನಾರಂಪಾಡಿ, ಜನನಿ ಕಾರಡ್ಕ, ಯಶೋಧ ಕುಂಬ್ಡಾಜೆ, ಮಾಲತಿ ಬೆಳ್ಳೂರು, ಅಶ್ವಿನಿ ಕೆ.ಎಂ, ಗುರುಪ್ರಸಾದ್ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು. ಶ್ರೀಧರ ಬೆಳ್ಳೂರು ಸ್ವಾಗತಿಸಿ ರವೀಂದ್ರ ರೈ ಗೋಸಾಡ ವಂದಿಸಿದರು. ಜನಮನಗಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
Tags
ಮುಳ್ಳೇರಿಯ


