ಕಾಸರಗೋಡು: ಹೊಕ್ಕಳಿಗೆ ಸಂಬಂಧಿಸಿದ ಕಾಯಿಲೆಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಬೇಡಕಂ, ತಳೇಕ್ಕುನ್ನು ನಿವಾಸಿ ಅಶ್ರಫ್ ಸಖಾಫಿ- ಬುಷ್ರಾ ದಂಪತಿಯ ಪುತ್ರ ಮುಹಮ್ಮದ್ ಇಯಾಸ್ (9) ಮೃತಪಟ್ಟ ಬಾಲಕ.
ನೆನ್ನೆ (ಮಂಗಳವಾರ) ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಮಗುವನ್ನು ಶಸ್ತ್ರಚಿಕಿತ್ಸೆಗಾಗಿ ಥಿಯೇಟರ್‌ಗೆ ಕರೆದೊಯ್ಯಲಾಗಿತ್ತು. ಆಪರೇಷನ್ ಬಳಿಕ ಮಗುವಿನ ನಾಡಿಮಿಡಿತ (ಪಲ್ಸ್) ಗಣನೀಯವಾಗಿ ಕುಸಿದಿತ್ತು ಎಂದು ಹೇಳಲಾಗಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಸಾವು ದೃಢಪಟ್ಟಿದೆ. ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಕಾಸರಗೋಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಸ್ಮತ್, ಇಸ್ಲಾಂ ಇವರ ಸಹೋದರರು.
Tags
ಕಾಸರಗೋಡು
