ಮುಳಿಯಾರು:ರಾಜ್ಯ ಸರ್ಕಾರದ ನೂರು ದಿನಗಳ ಕರ್ಮಸೂಚಿ ಕಾರ್ಯಕ್ರಮದ ಭಾಗವಾಗಿ, ಕಾಡುಹಂದಿಗಳ ನಿರ್ಮೂಲನೆಗಾಗಿ ಮುಳಿಯಾರು ಪಂಚಾಯತ್‌ನ ಮಳಿಕಾಲ್‌ನಲ್ಲಿ ರಾತ್ರಿ ಅವಧಿಯ ಗಸ್ತಿನಲ್ಲಿದ್ದ ಶೂಟರ್ ಬಿ. ಅಬ್ದುಲ್ ಗಫೂರ್ ನೇತೃತ್ವದ ವಿಶೇಷ ತಂಡವು ಕಾಡುಹಂದಿಯೊಂದನ್ನು ಗುಂಡಿಟ್ಟು ಕೊಂದಿದೆ.
ಮುಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಬಿ. ಮುಹಮ್ಮದ್ ಕುಂಞಿ, ಕಾಸರಗೋಡು ರೇಂಜ್ ಫಾರೆಸ್ಟ್ ಆಫೀಸರ್ ವಿನೋದ್ ಕುಮಾರ್, ಡೆಪ್ಯುಟಿ ರೇಂಜ್ ಫಾರೆಸ್ಟ್ ಆಫೀಸರ್ (ಆರ್.ಆರ್.ಟಿ) ಎನ್.ವಿ. ಸತ್ಯನ್, ಸೆಕ್ಷನ್ ಫಾರೆಸ್ಟ್ ಆಫೀಸರ್ ಕೆ.ಎ. ಬಾಬು, ಅಬ್ದುಲ್ಲಾ ಕುಂಞಿ ಕುಳತ್ತೂರ್, ಸಾಮಾಜಿಕ ಕಾರ್ಯಕರ್ತ ಮಸೂದ್ ಬೋವಿಕಾನಂ, ಬೀಟ್ ಫಾರೆಸ್ಟ್ ಆಫೀಸರ್‌ಗಳು ಹಾಗೂ ಆರ್.ಆರ್.ಟಿ ಸದಸ್ಯರು ಸ್ಥಳಕ್ಕೆ ಆಗಮಿಸಿದ್ದರು.
ರೈತರು ಕಾಡುಹಂದಿಗಳನ್ನು ಕಂಡ ತಕ್ಷಣವೇ ಮಾಹಿತಿ ನೀಡಬೇಕೆಂದು ಶೂಟರ್ ಬಿ. ಅಬ್ದುಲ್ ಗಫೂರ್ ತಿಳಿಸಿದ್ದಾರೆ. ಬಳಿಕ ನಿಯಮಾನುಸಾರ ಕ್ರಮಗಳನ್ನು ಪೂರ್ಣಗೊಳಿಸಿ, ವೈಜ್ಞಾನಿಕವಾಗಿ ಹಂದಿಯ ಸಂಸ್ಕಾರ (ವಿಲೇವಾರಿ) ಮಾಡಲಾಯಿತು.
Tags
ಕಾಸರಗೋಡು
