ಬಿಜೆಪಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ; ಗಿಡ ನೆಡುವುದರ ಮೂಲಕ ಮಾನವ ಮತ್ತು ಪ್ರಕೃತಿಯ ನಡುವಿನ ಬಾಂಧವ್ಯ ವರ್ಧಿಸುವುದು.:- ಅಶ್ವಿನಿ ಕೆಯಂ


ಬದಿಯಡ್ಕ:- ಪೆರಡಾಲ ಹದಿಮೂರನೇ ವಾರ್ಡ್ ಬಿಜೆಪಿ ಸಮಿತಿಯ ವತಿಯಿಂದ ವಿಶ್ವ ಪರಿಸರ ದಿನದಂಗವಾಗಿ ನವಜೀವನ ಹೈಸ್ಕೂಲ್ ರಸ್ತೆ ಹಾಗೂ ಶಾಸ್ತ್ರೀ ಕಾಂಪೌಂಡ್ ರಸ್ತೆಯ ಶುಚಿಕರಣ ಹಾಗು ಗಿಡ ನೆಡುವ ಕಾರ್ಯಕ್ರಮವು ವಾರ್ಡ್ ಸಮಿತಿ ಅಧ್ಯಕ್ಷರಾದ ನಾರಾಯಣ ಮಾಸ್ಟರ್ ಮೈರ್ಕಳ ಅವರ ನೇತೃತ್ವದಲ್ಲಿ ನಡೆಯಿತು. ಬಿಜೆಪಿ ಬದಿಯಡ್ಕ ಪಂಚಾಯತ್ ಅಧ್ಯಕ್ಷ ಉದನೇಶ್ವರ ಬಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಬದಿಯಡ್ಕ ಪಂಚಾಯತ್ ಉಪಾಧ್ಯಕ್ಷೆ ಯೂ ವಾರ್ಡ್ ಪ್ರತಿನಿಧಿ ಯೂ ಆದಂತಹ ಅಶ್ವಿನಿ ಕೆ ಯಂ ಉದ್ಘಾಟಿಸಿ "2026 ರ ವಿಶ್ವ ಪರಿಸರ ದಿನದ ಸಂದೇಶವಾದ ಹವಮಾನ ಕ್ರಿಯೆ, ಸುಸ್ಥಿರ ಅಭಿವೃಧ್ಧಿಯ ಯ ಬಗ್ಗೆ ವಿವರಿಸಿ, ಗಿಡ ನೆಡುವುದರಿಂದ ಮಾನವ ಮತ್ತು ಪ್ರಕೃತಿ ಯ ನಡುವಿನ ಬಾಂಧವ್ಯ ಹೆಚ್ಚುತ್ತದೆ" ಎಂದು ನುಡಿದರು.

ಕಾರ್ಯಕ್ರಮಕ್ಕೆ ಶುಭಾಶಂಸನೆಗೈದು ಮಾತನಾಡಿದ ಬದಿಯಡ್ಕ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕಡಾರು " ಶಾಲಾ ಜೀವನದಲ್ಲಿ ನೆಟ್ಟ ಹಲಸಿನ ಗಿಡವೊಂದು ಇಂದು ಫಲವನ್ನು ನೀಡುತ್ತಿದ್ದು ಇಂದು ನೆಟ್ಟ ಹಲಸಿನ ಗಿಡವು ಮುಂದಿನ ಪೀಳಿಗೆಗೆ ಫಲವನ್ನು ನೀಡಲಿ" ಎಂದು ಹಾರೈಸಿದರು. 

ಬಿರುಸಿನ ಮಳೆಯನ್ನು ಲೆಕ್ಕಿಸದೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದ ರಸ್ತೆ ಬದಿಗಳನ್ನು ಶುಚಿಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯ ಸಾಯಿ, ಪುಂಡಲೀಕ ಆಚಾರ್ಯ, ಬಾಲಸುಬ್ರಹ್ಮಣ್ಯ ಭಟ್, ದೇವಪ್ಪ ಮುರಿಯಂಕೂಡ್ಲು, ರಘುನಾಥ ರೈ, ಪ್ರಫುಲ್ಲ, ಅಜಿತ್ ಎಂಬಿವರು ಭಾಗವಹಿಸಿದರು. ಸಾಯಿ ಪ್ರಣವ್ ಸ್ವಾಗತಿಸಿ, ವಾರ್ಡ್ ಪ್ರಧಾನ ಕಾರ್ಯದರ್ಶಿ ನಾರಾಯಣ.ಪಿ ಪೆರಡಾಲ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು