ಪೆರ್ಲ: ಸಾಂದೀಪನಿ ಯೋಗಾಲಯಂ ಇದರ ವತಿಯಿಂದ ಪೆರ್ಲ ಭಾರತೀ ಸದನದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಿತು.
ಸೂರ್ಯನ ಹೊಂಗಿರಣ ಭಾರತದ ಮೇಲೆ ಅಧಿಕವಾಗಿ ಬೀಳುವ ದಿನವೇ ಜೂನ್ 21 ವಿಶ್ವದ ದೇವರ ಕೋಣೆ ಭಾರತ.
ಜಗತ್ತಿನ ಒಳಿತು ಭಾರತದಲ್ಲಿದೆ ಶಾಂತಿ, ಸಮಾಧಾನ., ಸಹಬಾಳ್ವೆ. ಜಗತ್ತೇ ಒಂದು ಕುಟುಂಬ ಎಂಬ ಭಾವನೆಯಿಂದ ನಾವು ಕಾರ್ಯಪ್ರವೃತ್ತರಾಗಲು ಅಷ್ಟಾಂಗ ಯೋಗದ ಮೂಲಪಾಠವಾದ ಭಗವದ್ಗೀತೆಯ ಕರ್ತಾರ ಭಗವಾನ್ ಶ್ರೀ ಕೃಷ್ಣ ಜಗತ್ತಿಗೆ ತಿಳಿ ಹೇಳಿದ ಧರ್ಮದ 10 ಮುಖಗಳಾ ದ ಯಮ ನಿಯಮವನ್ನು ಜೀವನದಲ್ಲಿ ಪಾಲಿಸಿ ಇತರರಿಗೂ ಬೋಧಿಸುವ ಸಾಮರ್ಥ್ಯವನ್ನು ಗಳಿಸಿಕೊಂಡಾಗ ನಾವು ಶಾರೀರಿಕ ಹಾಗೂ ಮಾನಸಿಕವಾಗಿ ಸಬಲರಾಗಿ ಕುಟುಂಬಗಳು ಸಮೃದ್ಧಿಯಾಗಿ ಅದರಿಂದ ಭಾರತ ಜಗನ್ಮಾತೆಯಾಗಿ ಕಂಗೊಳಿಸಲು ವಿಶ್ವ ಯೋಗ ದಿನ ನಮಗೆ ಹೊಸ ದಿಕ್ಕನ್ನು ನೀಡಲಿ ಅದಕ್ಕೆ ಬೇಕಾದ ಶಕ್ತಿಯನ್ನು ಮನೋ ಧೈರ್ಯವನ್ನು ಗಳಿಸೋಣ ಎಂದು ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು ತಿಳಿಸಿದರು ಯೋಗ ಶಿಕ್ಷಕಿ ಶ್ರೀಮತಿ ದಿವ್ಯ ಶರ್ಮ ಪಳ್ಳತಡ್ಕ, ಯೋಗ ಸಮಿತಿ ಅಧ್ಯಕ್ಷ ಶ್ರೀಮತಿ. ಮೋಹಿನಿ ಶೆಟ್ಟಿ ಕಾರ್ಯದರ್ಶಿ ಶ್ರೀಮತಿ ರಾಜೇಶ್ವರಿ. ಯೋಗಭ್ಯಾಸಿಗಳಾದ ಶ್ರೀಮತಿ ಸುಜಾತ ಪಳ್ಳತಡ್ಕ . ಶ್ರೀಮತಿ ಗಾಯತ್ರಿ. ಶ್ರೀಮತಿ ಪ್ರೇಮ ಪೆರ್ಲ ಉಪಸ್ಥಿತರಿದ್ದರು. ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ಕೊನೆಯಲ್ಲಿ ಯೋಗಾಭ್ಯಾಸಿಗಳು ಮನೆಯಿಂದ ಮಾಡಿ ತಂದ ಔಷಧಿ ಆಹಾರಗಳನ್ನು ನೀಡಿ ರೋಗ ನಿವಾರಣೆಗೆ ಬೇಕಾದ ವಿಚಾರಗಳನ್ನು ತಿಳಿಯಪಡಿಸಿದರು.
