ಕಲ್ಕತ್ತಾದಲ್ಲಿ ಯುವತಿಯನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿ ಪೆರುಂಬಾವೂರ್‌ನಲ್ಲಿ ಬಂಧನ


ಕೊಚ್ಚಿನ್:ಕಲ್ಕತ್ತಾದಲ್ಲಿ ಯುವತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ ಪ್ರಕರಣದ ಆರೋಪಿಯನ್ನು ಕೇರಳದ ಪೆರುಂಬಾವೂರ್ ನಿಂದ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಕೃಷ್ಣಕುಂಚಿ ನಿವಾಸಿ ಫಕೀರ್ ಮಂಡಲ್ (51) ಬಂಧಿತ ಆರೋಪಿ.

ಕೊಲ್ಕತ್ತಾದ ಬಾಗುಯಾಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭೀಕರ ಕೊಲೆ ನಡೆದಿತ್ತು. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರು. ಕಳೆದ ಒಂದು ವಾರದಿಂದ ಈತ ಪೆರುಂಬಾವೂರ್‌ನ ಮುಡಿಕಲ್ ಕುದುರಪ್ಪರಂಬ್ ಪ್ರದೇಶದಲ್ಲಿ ಅಡಗಿ ಕುಳಿತಿದ್ದ.

ಪೆರುಂಬಾವೂರ್ ಇನ್ಸ್‌ಪೆಕ್ಟರ್ ಎಲ್. ಅನಿಲ್‌ಕುಮಾರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ವಿಷ್ಣು ಮುರಳಿ, ಆದರ್ಶ್, ಸೀನಿಯರ್ ಸಿ.ಪಿ.ಒ ಬೆನ್ನಿ ಐಸಾಕ್ ಮತ್ತು ಸಿ.ಪಿ.ಒ ಎ.ಕೆ. ನಜಿಮಿ ಅವರನ್ನೊಳಗೊಂಡ ತನಿಖಾ ತಂಡ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಬಂಧನದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಪೆರುಂಬಾವೂರ್ ಪೊಲೀಸರು ಆರೋಪಿಯನ್ನು ಪಶ್ಚಿಮ ಬಂಗಾಳ ಪೊಲೀಸರಿಗೆ ಒಪ್ಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು