ತಿರುವನಂತಪುರಂನಲ್ಲಿ ಸಿಪಿಎಂ ದೌರ್ಜನ್ಯದ ವಿರುದ್ಧ ಬಿಜೆಪಿ ಪ್ರತಿಭಟನೆ


 ಕಾಸರಗೋಡು: ತಿರುವನಂತಪುರಂ ಕಾರ್ಪೊರೇಷನ್ ಮೇಯರ್, ಡೆಪ್ಯುಟಿ ಮೇಯರ್ ಸೇರಿದಂತೆ ಬಿಜೆಪಿ ಕೌನ್ಸಿಲರ್‌ಗಳ ವಿರುದ್ಧ ದೌರ್ಜನ್ಯ ಎಸಗಿದ ಸಿಪಿಎಂ ಕ್ರಮವನ್ನು ಖಂಡಿಸಿ, ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ಆಯೋಜಿಸಲಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಕಾರ್ಯಕ್ರಮವನ್ನು ಉದ್ಘಾಟಿಸಿದರು.

"ಸಿಪಿಎಂಗೆ ರಾಜ್ಯ ಭ್ರಷ್ಟಾಚಾರ ಅಥವಾ ಆಡಳಿತ ನಷ್ಟವಾಗಿರುವುದಕ್ಕಿಂತ ಹೆಚ್ಚಿನ ಆತಂಕ ಮತ್ತು ಅಸಮಾಧಾನವಿರುವುದು ತಿರುವನಂತಪುರಂ ಕಾರ್ಪೊರೇಷನ್ ಆಡಳಿತ ಕೈತಪ್ಪಿರುವುದಕ್ಕಾಗಿದೆ," ಎಂದು ಅಶ್ವಿನಿ ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನುಲಾಲ್ ಮೇಲತ್, ಎನ್. ಬಾಬುರಾಜ್,ಪಿ. ಆರ್. ಸುನಿಲ್,ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಶೈಬು, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್ ಸುಕುಮಾರ ಕುದ್ರೆಪಾಡಿ, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕುಲಾಲ್,ಟಿ.ವಿ. ಮುರಳಿ (ಜಿಲ್ಲಾ ಉಪಾಧ್ಯಕ್ಷ)ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ) ಅನಿತಾ ನಾಯಕ್ ಮೊದಲಾದವರು ನೇತೃತ್ವ ವಹಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು