ಬದಿಯಡ್ಕ: ಅಂಗಡಿಯ ವರಾಂಡದಲ್ಲಿ ಮಲಗಿದ್ದ ದನಗಳನ್ನು ಕಾರಿನಲ್ಲಿ ಕಳವು ಮಾಡಿಕೊಂಡು ಹೋಗಿರುವ ಕುರಿತು ದೂರು ದಾಖಲಾಗಿದೆ. ಕನ್ಯಪ್ಪಾಡಿ ರಹಮತ್ ಮಂಜಿಲ್‌ನ ಕೆ.ಎಂ. ಮುಹಮ್ಮದ್ ನೀಡಿದ ದೂರಿನ ಮೇರೆಗೆ ಅಪರಿಚಿತ ಮೂವರ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿನ್ನೆ (ಮಂಗಳವಾರ) ಮುಂಜಾನೆ ಒಂದೂವರೆ ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಮನೆಯ ಸಮೀಪದ ಅಂಗಡಿಯ ಮುಂಭಾಗದ ವರಾಂಡದಲ್ಲಿ ರಾತ್ರಿ ವೇಳೆ ಹಸುಗಳನ್ನು ಕಟ್ಟುವುದು ವಾಡಿಕೆಯಾಗಿತ್ತು. ಇದನ್ನು ಮನಗಂಡ ಕಳ್ಳರ ಗ್ಯಾಂಗ್, ರಾತ್ರಿ ವೇಳೆ ಬಂದು 'ಸೈಲೋ' (Xylo) ಕಾರಿನಲ್ಲಿ ಹಸುಗಳನ್ನು ಸಾಗಿಸಿರುವ ಶಂಕೆ ವ್ಯಕ್ತಪಡಿಸಲಾಗಿದ್ದು, ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Tags
ಬದಿಯಡ್ಕ
