ಗಡಿ ಭದ್ರತಾ ಪಡೆಗೆ ಆಯ್ಕೆ; ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ವತಿಯಿಂದ ಅಭಿನಂದನೆ


 ಬದಿಯಡ್ಕ:ಭಾರತೀಯ ಗಡಿ ಭದ್ರತಾ ಪಡೆಗೆ (BSF) ಆಯ್ಕೆಯಾದ ಚೆಡೇಕಲ್‌ನ ಶ್ರೀ ಕುಂಜಿಕಣ್ಣನ್ ಅವರ ಪುತ್ರ ಡಿಪಿನ್ ಅವರನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಅಭಿನಂದಿಸಲಾಯಿತು. ದೇಶದ ಸುರಕ್ಷತೆಯ ಭಾಗವಾಗಲು ಅವಕಾಶ ಪಡೆದ ಡಿಪಿನ್ ಅವರ ಈ ಸಾಧನೆ ಇಡೀ ನಾಡಿಗೆ ಹೆಮ್ಮೆಯ ವಿಷಯ ಎಂದು ಸಮಾರಂಭದಲ್ಲಿ ಮಾತನಾಡಿದ ಮುಖಂಡರು ಅಭಿಪ್ರಾಯಪಟ್ಟರು.

ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅವರು ಡಿಪಿನ್ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಬ್ಲಾಕ್ ಸದಸ್ಯ ಖಾದರ್ ಮಾನ್ಯ, ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಲೋಹಿತಾಕ್ಷನ್, ಗಿರೀಶ್ ಮುಂತಾದವರು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಂಡಲ ಸಮಿತಿಯ ವತಿಯಿಂದ ದೀಪ್ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು