ಕಾಸರಗೋಡು:- ಎಸ್ ಸಿ ಮೋರ್ಚಾದ ವತಿಯಿಂದ ಅಯ್ಯಂಗಾಳಿ ಸಮಾಧಿ ದಿನದಂದು "ಬಿರ್ಸಾ ಮುಂಡಾ ಅನ್ಸಂಗ್ ಹೀರೋ ಅವಾರ್ಡ್ ಪಡೆದ ಮಧೂರು ಪಂಚಾಯತಿನ ಪುಲ್ಕೂರು ನಿವಾಸಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂಜೀವ ಪುಲ್ಕೂರು ಇವರನ್ನು ಎಸ್ ಸಿ ಮೋರ್ಚಾ ರಾಜ್ಯ ಸಮಿತಿ ಉಪಾಧ್ಯಕ್ಷ ಎಕೆ ಕಯ್ಯಾರ್ ಶಾಲು ಹೊದೆಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಎಸ್ ಸಿ ಮೋರ್ಚಾ ಮಾಜಿ ಜಿಲ್ಲಾ ಅಧ್ಯಕ್ಷರೂ ಮೊಗ್ರಾಲ್ ಪುತ್ತೂರು ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಸಂಪತ್ ಪೆರ್ಣಡ್ಕ ಬುಡಕಟ್ಟು ಜನಾಂಗದ ಮಹಾನ್ ನಾಯಕರಾದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸ ಮುಂಡಾ ಅವರ ಬಗ್ಗೆ ನೆನಪಿಸಿಕೊಂಡರು.
ಎಸ್ ಸಿ ಮೋರ್ಚಾ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ. ಪೆರಡಾಲ ಮಹಾತ್ಮ ಅಯ್ಯಂಗಾಳಿಯವರ ಜೀವನ ಚರಿತ್ರೆಯನ್ನು ನೆನಪಿಸಿ ಕೊಂಡರು. ಮದೂರು ಪಂಚಾಯತ್ ಸದಸ್ಯರಾದ ಚಂದ್ರ ಪೆರಿಯಡ್ಕ, ಎಸ್ ಸಿ ಮೋರ್ಚಾ ಮಾಜಿ ಜಿಲ್ಲಾ ಕೋಶಾಧಿಕಾರಿ ಮಣಿ ನೆಲ್ಕಳ, ಎಸ್ ಸಿ ಮೋರ್ಚಾ ಮಾಜಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ವಿಜು ಪೆರ್ಣಡ್ಕ ಎಂಬಿವರು ಶುಭ ಹಾರೈಸಿದರು.
Tags
ಕಾಸರಗೋಡು

