ಕಾಸರಗೋಡು: ಮಹಾರಾಷ್ಟ್ರದಲ್ಲಿ ಸೆಪ್ಟಿಕ್ ಟ್ಯಾಂಕ್‌ನ ಮ್ಯಾನ್‌ಹೋಲ್ ಒಳಗೆ ಬಿದ್ದು ಕಾಸರಗೋಡು ನಿವಾಸಿ ಇಂಜಿನಿಯರ್ ಮೃತಪಟ್ಟ ಘಟನೆ ನಡೆದಿದೆ. ಉದಿನೂರು ವಡಕ್ಕುಪುರಂ ನಿವಾಸಿ ಕೆ. ರತೀಶ್ (42) ಮೃತಪಟ್ಟ ದುರ್ದೈವಿ.
ಮುಂಬೈ ಸಮೀಪದ ನಾಗೋಥಾನೆಯ ಕೆಲಸದ ಸ್ಥಳದಲ್ಲಿ ಈ ಘಟನೆ ನಡೆದಿದೆ. ರತೀಶ್ ಅವರು 'ಇಂಡಸ್ಟ್ರಿಯಲ್ ಎನರ್ಜಿ ಸೊಲ್ಯೂಷನ್' ಎಂಬ ಕಂಪನಿಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಸಂಜೆ 4 ಗಂಟೆಯ ಸುಮಾರಿಗೆ ಈ ದುರಂತ ನಡೆದಿದೆ. ರತೀಶ್ ಅವರು ಕಾಣೆಯಾದ ಹಿನ್ನೆಲೆಯಲ್ಲಿ ನಡೆಸಿದ ಹುಡುಕಾಟದ ಬಳಿಕ, ರಾತ್ರಿ 9 ಗಂಟೆಗೆ ಅವರ ಮೃತದೇಹ ಪತ್ತೆಯಾಗಿದೆ. ಅವರು ಕಳೆದ ಹಲವು ವರ್ಷಗಳಿಂದ ಇದೇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಸಂಬಂಧಿಕರು ಮುಂಬೈಗೆ ಧಾವಿಸಿ ಮೃತದೇಹವನ್ನು ಊರಿಗೆ ತಂದಿದ್ದಾರೆ.
ರತೀಶ್ ಅವರು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ರೋಹಾ ತಾಲೂಕಿನಲ್ಲಿ ವಾಸಿಸುತ್ತಿದ್ದರು. ಇವರು ದಿವಂಗತ ಮಾಡಕ್ಕಾಲ್ ಕುಞಂಬು ಮತ್ತು ಕೆ. ಮಾಧವಿ ದಂಪತಿಯ ಪುತ್ರರಾಗಿದ್ದಾರೆ. ಮೃತರು ಪತ್ನಿ ಜಿಷ್ಣಾ, ಮಕ್ಕಳಾದ ಆರವ್ ಮತ್ತು ಅಥರ್ವ್, ಸಹೋದರರ ಸಹೋದರಿಯರಾದ: ಕೆ. ಪುಷ್ಪಾ, ಕೆ. ಬಾಬು (ಕೆ.ಎಸ್.ಇ.ಬಿ, ತೃಕ್ಕರಿಪುರ), ಕೆ. ಸಜೀವನ್ (ಕಟ್ಟಡ ಕಾರ್ಮಿಕ) ಎಂಬಿವರನ್ನು ಅಗಲಿದ್ದಾರೆ
