ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯಲ್ಲಿ ಯೋಗ ದಿನಾಚರಣೆ


ನೀರ್ಚಾಲು: ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯಲ್ಲಿ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಪ್ರಶಾಂತ್ ಕುಮಾರ್ ಕೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಯಟ್ ಮಾಯಿಪ್ಪಾಡಿ ಇಲ್ಲಿನ ಉಪನ್ಯಾಸಕರಾದಂತಹ ಶ್ರೀ ಕುಮಾರ ಸುಬ್ರಹ್ಮಣ್ಯ ಇವರು ಶಾಲಾ ಮಕ್ಕಳಿಗೆ ಯೋಗ ತರಗತಿಯನ್ನು ನಡೆಸಿಕೊಟ್ಟರು. ಯೋಗದ ಬಗ್ಗೆ ಮಾತನಾಡಿ ಯೋಗದ ಹಂತಗಳ ಕುರಿತು ತಿಳಿಸಿಕೊಟ್ಟರು. ಯೋಗ ದಿನದಂದು ಮಾತ್ರ ಯೋಗ ಮಾಡದೆ ಅದು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಮಕ್ಕಳಿಗೆ ತಿಳಿಹೇಳಿದರು.

 ಅಧ್ಯಾಪಿಕೆ ಶ್ರೀಮತಿ ಅಖಿಲ ಲಕ್ಷ್ಮಿ ಸ್ವಾಗತಿಸಿದರು. ಸ್ಟಾಫ್ ಸೆಕ್ರೆಟರಿ ಸುಭಾಷ್ ಇ ಕೆ, ಎಸ್ ಆರ್ ಜಿ ಕನ್ವೀನರ್ ಶರತ್ ಕುಮಾರ್ ಶುಭ ಹಾರೈಸಿದರು.

ಅಧ್ಯಾಪಕ ಅಬ್ದುಲ್ ಸಲಾಂ  ಕಾರ್ಯಕ್ರಮ ನಿರೂಪಿಸಿದರೆ  ಹಿರಿಯ ಅಧ್ಯಾಪಿಕೆ ಜ್ಯೋತಿ ಕೆ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು