ಬದಿಯಡ್ಕ: ವಿವಾಹಿತ ಮಹಿಳೆಯ ಮೃತದೇಹ ಸ್ನಾನ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೈಕ ಚಾಂಡಿಮೂಲೆಯ ಚಿತ್ರಕಲಾ (41) ಮೃತಪಟ್ಟ ಮಹಿಳೆ.
ನಿನ್ನೆ (ಗುರುವಾರ) ಮಧ್ಯಾಹ್ನ 12.45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮನೆಯ ಸಮೀಪದ ಸ್ನಾನದ ಗೃಹದಲ್ಲಿ ಚಿತ್ರಕಲಾ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಅವರನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.
ಮೃತರು ಪತಿ ಶಂಕರನ್, ಮಕ್ಕಳಾದ ಪ್ರೀತೇಶ್ ಮತ್ತು ಪ್ರಖ್ಯಾತ್ ಅವರನ್ನು ಅಗಲಿದ್ದಾರೆ.
Tags
ಬದಿಯಡ್ಕ
