ಕುಂಬ್ಡಾಜೆ: ಕುಂಬ್ಡಾಜೆ ಗ್ರಾಮ ಪಂಚಾಯತಿನ ಪೊಡಿಪ್ಪಳದ ರವಿ-ಪುಷ್ಪಲತಾ ದಂಪತಿಗಳ ಪುತ್ರಿ ಕುಮಾರಿ ಪ್ರವೀಶ ರವಿ ರವರು ತನ್ನ ಶಾರೀರಿಕ ವೈಖಲ್ಯವನ್ನು ಮೆಟ್ಟಿ ನಿಂತು 2025/26 ಸಾಲಿನ +2 ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡು ಕುಂಬಡಾಜೆ ಪಂಚಾಯತಿಗೆ ಹೆಮ್ಮೆಯನ್ನು ತಂದಿದ್ದಾರೆ. ಇದನ್ನು ಮನಗಂಡು ಭಾರತೀಯ ಜನತಾ ಪಾರ್ಟಿ ಕುಂಬಡಾಜೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಅವರ ಮನೆಗೆ ತೆರಳಿ ಶಾಲು ಹೊದೆಸಿ ಫಲ ಪುಷ್ಪ, ಪುಸ್ತಕ ವನ್ನು ನೀಡಿಕೊಂಡು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೋಝಿಕ್ಕೊಡು ವಲಯ ಪ್ರಧಾನ ಕಾರ್ಯದರ್ಶಿ, ಕಾರಡ್ಕ ಬ್ಲಾಕು ಪಂಚಾಯತ್ ಸದಸ್ಯರಾದ ಸುಧಾಮ ಗೋಸಾಡ,, ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ ನೇತಾರರಾದ ರಾಜೇಶ್ ಶೆಟ್ಟಿ ಬಲೆಕ್ಕಳ, ಹರೀಶ್ ಜೋಗಿ, ರಾಜೇಶ್ ಪೊಡಿಪ್ಪಳ, ಜನಾರ್ಧನ ಪೊಡಿಪ್ಪಳ, ಯೋಗೀಶ್ ಪೊಡಿಪ್ಪಳ ಮೊದಲಾದವರು ಉಪಸ್ಥಿತರಿದ್ದರು.
Tags
ಕುಂಬ್ಡಾಜೆ
