ಮಲಪ್ಪುರಂ: ತಾಯಿ ಮತ್ತು ಮಗು ಭಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಏಳೂರು ನಿವಾಸಿ ಇರ್ಫಾನಾ (30) ಮತ್ತು ಆಕೆಯ ಒಂದೂವರೆ ವರ್ಷದ ಮಗ ಅಮಾನ್ ಮಲಿಕ್ ಮೃತಪಟ್ಟವರು.
ಇರ್ಫಾನಾ ಅವರ ಕೊಠಡಿಯಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೃತದೇಹಗಳನ್ನು ತಿರೂರು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಇರ್ಫಾನಾ ಅವರ ಪತಿ, ಕೋಝಿಕೋಡ್ ಮೂಲದ ರಾಫಿ ವಿದೇಶದಲ್ಲಿದ್ದಾರೆ. ಇರ್ಫಾನಾ ಅವರ ತಂದೆ ಮಸೀದಿಗೆ ಹೋಗಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.
ನಾಲ್ಕು ತಿಂಗಳ ಹಿಂದೆಯಷ್ಟೇ ಇರ್ಫಾನಾ ಅವರ ತಾಯಿ ನಿಧನರಾಗಿದ್ದರು. ತಾಯಿಯ ಸಾವಿನ ನಂತರ ಅವರು ತೀವ್ರ ಮನನೊಂದಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Tags
ಕೋಜಿಕ್ಕೋಡ್
